ಅನ್ನಭಾಗ್ಯಕ್ಕೆ ಗುನ್ನ ಹಾಕಿದ್ರೂ ಸಿದ್ದರಾಮಯ್ಯನನ್ನು ಓಲೈಸಲು ಎಚ್ ಡಿಕೆ ಪ್ರಯತ್ನ

First Published Jul 5, 2018, 2:00 PM IST
Highlights

ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಅನ್ನಭಾಗ್ಯಕ್ಕೆ ಕತ್ತರಿ ಹಾಕಿದ್ದರೂ ಸಂಪೂರ್ಣವಾಗಿ ನಿಲ್ಲಿಸಿಲ್ಲ.  ಅನ್ನಭಾಗ್ಯ ಯೋಜನೆಯನ್ನು 7 ಕೆಜಿ ಬದಲು 5 ಕೆಜೆಗೆ ಇಳಿಸಲಾಗಿದೆ. 5 ಕೆಜಿ ಅಕ್ಕಿ ಜೊತೆ 1 ಕೆಜಿ ಪಾಮ್ ಎಣ್ಣೆ, 1 ಕೆಜಿ ಉಪ್ಪು, 1 ಕೆಜಿ ಸಕ್ಕರೆ, ಅರ್ಧ ಕೆಜಿ ತೊಗರಿ ಬೇಳೆಯನ್ನು ಬಿಪಿಎಲ್ ಪಡಿತರದಾರರಿಗೆ ನೀಡಲಾಗುತ್ತದೆ.  3.85 ಕೋಟಿ ಜನರು ಅನ್ನಭಾಗ್ಯದ ಫಲಾನುಭವಿಗಳಾಗಿದ್ದಾರೆ.  

ಬೆಂಗಳೂರು (ಜೂ. 05): ಸಿಎಂ ಕುಮಾರ ಸ್ವಾಮಿ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್’ಗೂ ಮುನ್ನ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆದಿತ್ತು. ಕಳೆದ ಸರ್ಕಾರದ ’ಭಾಗ್ಯ’ಗಳನ್ನು, ಯೋಜನೆಗಳನ್ನು ಮುಂದುವರೆಸುವಂತೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು.

ಈ ಬಜೆಟ್’ನಲ್ಲಿ ಹಿಂದಿನ ಸರ್ಕಾರದ ಯೋಜನೆಗಳನ್ನು  ಯಥಾವತ್ತಾಗಿ ಮುಂದುವರೆಸಲು ಅನುದಾನ ನೀಡದಿದ್ದರೂ ಕೆಲ ಯೋಜನೆಗಳನ್ನು ಮುಂದುವರೆಸಲು ಅನುದಾನ ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಅನ್ನಭಾಗ್ಯಕ್ಕೆ ಕತ್ತರಿ ಹಾಕಿದ್ದರೂ ಸಂಪೂರ್ಣವಾಗಿ ನಿಲ್ಲಿಸಿಲ್ಲ.  ಅನ್ನಭಾಗ್ಯ ಯೋಜನೆಯನ್ನು 7 ಕೆಜಿ ಬದಲು 5 ಕೆಜೆಗೆ ಇಳಿಸಲಾಗಿದೆ. 5 ಕೆಜಿ ಅಕ್ಕಿ ಜೊತೆ 1 ಕೆಜಿ ಪಾಮ್ ಎಣ್ಣೆ, 1 ಕೆಜಿ ಉಪ್ಪು, 1 ಕೆಜಿ ಸಕ್ಕರೆ, ಅರ್ಧ ಕೆಜಿ ತೊಗರಿ ಬೇಳೆಯನ್ನು ಬಿಪಿಎಲ್ ಪಡಿತರದಾರರಿಗೆ ನೀಡಲಾಗುತ್ತದೆ.  3.85 ಕೋಟಿ ಜನರು ಅನ್ನಭಾಗ್ಯದ ಫಲಾನುಭವಿಗಳಾಗಿದ್ದಾರೆ.  

ಇನ್ನು ವಿದ್ಯಾರ್ಥಿಗಳಿಗೆ ನೀಡುವ ಕ್ಷೀರ ಭಾಗ್ಯಯೋಜನೆಯನ್ನು ಮುಂದುವರೆಸಲಾಗುತ್ತದೆ. ಅದೇ ರೀತಿ ಇಂದಿರಾ ಕ್ಯಾಂಟೀನನ್ನು ಎಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಮಾತನ್ನು ಸಂಪೂರ್ಣವಾಗಿ ತೆಗೆದು ಹಾಕದೇ ಹಿಂದಿನ ಸರ್ಕಾರದ ಯೋಜನೆಗಳನ್ನು ಮುಂದುವರೆಸುವ ಮೂಲಕ ಎಚ್ ಡಿಕೆ ಸಿದ್ದರಾಮಯ್ಯರನ್ನು ಸಂತೈಸುವ ಪ್ರಯತ್ನ ಮಾಡಿದ್ದಾರೆ. 

click me!