
ಬೆಂಗಳೂರು(ಡಿ.14): ಮೇಟಿ ರಾಸಲೀಲೆ ಸಿಡಿಯನ್ನು ಮೊದಲೇ ಸಿಎಂ ಸಿದ್ದರಾಮಯ್ಯ ನೋಡಿದ್ರಾ? ರಾಸಲೀಲೆ ಸಿಡಿ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಗೊತ್ತಿತ್ತಾ? ಇಂತಹುದೊಂದು ಅನುಮಾನ ಬರಲು ಕಾರಣವಾಗಿದ್ದು ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ ಹೇಳಿಕೆ
ರಾಜ್ಯಾದ್ಯಂತ ಭಾರೀ ಚರ್ಚೆಗೀಡಾಗಿದ್ದ ಎಚ್. ವೈ ಮೇಟಿ ಪ್ರಕರಣ ಇಂದು ಬಹುದೊಡ್ಡ ಬೆಳವಣಿಗೆ ಕಂಡಿದೆ. RTI ಕಾರ್ಯಕರ್ತ ರಾಜಶೇಖರ್ ಮದೆಹಲಿಗೆ ತೆರಳಿ ಮೇಟಿಯ ರಾಸಲೀಲೆ ಸಿಡಿಯನ್ನು ಬಿಡುಗಡೆ ಮಾಡಿದ್ದು, ಇದರ ಬೆನ್ನಲ್ಲೇ ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದನ್ನು ನೋಡಿದ ಮರುಕ್ಷಣವೇ ಮೇಟಿ ತಮ್ಮ ಹುದ್ದೆಗೆ ರಾಜಿನಾಮೆಯನ್ನೂ ನೋಡಿದ್ದಾರೆ.
ಸದ್ಯ ಈ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿರುವ ಹೆಚ್ ಡಿ ಕುಮಾರಸ್ವಾಮಿ ಮೇಟಿಯ ರಾಸಲೀಲೆ ಸಿಡಿ ಮುಚ್ಚಿಡಲು ಸಿಎಂ ಸಿದ್ಧರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಇಂಥಹ ಪ್ರಕರಣಗಳನ್ನು ಮುಚ್ಚಿಡಲು ಸಿಎಂ ಬಳಿ ಒಂದು ತಂಡವೇ ಇದೆ. ಇವರು ಸಿಡಿ ಬಿಡುಗಡೆ ಮಾಡದಂತೆ ರಾಜಶೇಖರ್ಗೆ ಹಣದ ಆಮಿಷವೊಡ್ಡಿದ್ದರು ಹಾಗೂ ಮೇಟಿಯನ್ನು ರಕ್ಷಿಸಲು ಸಿಎಂ ಸಿದ್ದರಾಮಯ್ಯ ಕಸರತ್ತು ನಡೆಸಿದ್ದರು. ಸಿಡಿ ಬಹಿರಂಗಕ್ಕೂ ಮೊದಲೇ ಮೇಟಿ ರಾಜೀನಾಮೆ ಪಡೆಯಬೇಕಿತ್ತು. ಎಂದು ಹೇಳಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿಯ ಈ ಹೇಳಿಕೆಯನ್ನು ನೋಡಿದರೆ ಸಿಎಂಗೆ ಸಿಡಿ ವಿಚಾರ ಮೊದಲೇ ತಿಳಿದಿತ್ತಾ? ಎಂಬ ನುಮಾನ ಹುಟ್ಟಿಕೊಳ್ಳುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.