
ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಮೇಲೆ ಪ್ರಧಾನಿ ಮೋದಿ ಅವರನ್ನು ಎರಡು ಬಾರಿ ಭೇಟಿಯಾಗಿದ್ದು, ಎರಡೂ ಸಲ ಮೀಟಿಂಗ್ 30 ನಿಮಿಷದವರೆಗೆ ನಡೆದಿದೆ. ಕಳೆದ ವಾರ ನೀತಿ ಆಯೋಗದ ಸಭೆಗೆಂದು ಕುಮಾರಸ್ವಾಮಿ ದೆಹಲಿಗೆ ಬಂದಿದ್ದಾಗ ಕೇರಳದ ಸಿಎಂ ಪಿಣರಾಯಿ ವಿಜಯನ್ ಹಾಗೂ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಸಮಯ ಕೇಳಿದ್ದರು. ಇಬ್ಬರಿಗೂ ಸಮಯ ನಿರಾಕರಿಸಿದ ಮೋದಿ, ಕುಮಾರಸ್ವಾಮಿ ಅವರನ್ನು ಮಾತ್ರ ಕರೆಸಿಕೊಂಡು ಅರ್ಧ ಗಂಟೆ ಮಾತನಾಡಿದ್ದು ಕಾಂಗ್ರೆಸ್ ನಾಯಕರ ಹುಬ್ಬೇರಿಸಿದೆ.
ಎಲ್ಲಿ ನಿತೀಶ್ ಕುಮಾರ್ ತರಹ ಕುಮಾರಸ್ವಾಮಿಯನ್ನು ಅರ್ಧಕ್ಕೇ ಕರೆದುಕೊಂಡು ಹೋಗುತ್ತಾರೋ ಎಂಬ ಆತಂಕದಲ್ಲಿರುವ ರಾಹುಲ್ ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಕಾಲು ಕೆರೆದು ಜಗಳವಾಡಬೇಡಿ ಎಂದು ರಾಜ್ಯ ನಾಯಕರಿಗೆ ತಾಕೀತು ಮಾಡಿದ್ದಾರೆ.ಅಂದ ಹಾಗೆ ಮೋದಿ ಸಾಹೇಬರನ್ನು ಭೇಟಿ ಆಗಿ ಬಂದಾಗಲೆಲ್ಲ ಮಾರಸ್ವಾಮಿ ಮುಖ ಲಕಲಕ ಹೊಳೆಯುತ್ತಿರುತ್ತದೆ ಎಂಬುದು ಕಾಕತಾಳೀಯವೂ ಇರಬಹುದು ಬಿಡಿ.
(ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.