
ಬೆಂಗಳೂರು (ಏ.04): ಅನಾರೋಗ್ಯದ ಹಿನ್ನಲೆಯಲ್ಲಿ ಹೆಚ್ಡಿಕೆಯವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸತತ ಓಡಾಟವೇ ಇದಕ್ಕೆ ಕಾರಣ ಎಂದು ವೈದ್ಯರೂ ಕೂಡ ದೃಢಪಡಿಸಿದ್ದಾರೆ. ಅವರಿಗೆ ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದರು.
ಪ್ರಚಾರದ ಹಿನ್ನೆಲೆಯಲ್ಲಿ ಸತತ ಓಡಾಟದಿಂದ ಬಸವಳಿದು ಉಸಿರಾಟದ ತೊಂದರೆಗೊಳಗಾಗಿದ್ದ ಮಾಜಿ ಹೆಚ್ ಡಿ ಕುಮಾರ ಸ್ವಾಮಿಯವರ ಆರೋಗ್ಯ ಈಗ ಸ್ಥಿರವಾಗಿದೆ. ಈ ಹಿಂದೆ ಚಿತ್ರದುರ್ಗ, ಮೈಸೂರು ನರಸೀ ಪುರ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರವಾಸ ಕೈಗೊಂಡ ಸಂಧರ್ಭದಲ್ಲಿ ಧೂಳು ಮತ್ತು ಪಟಾಕಿ ಹೊಗೆಯಿಂದ ಕೆಮ್ಮ, ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಹೀಗಾಗಿ ಕಳೆದ ಎರಡು ದಿನಗಳಿಂದ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿಯವರ ಆರೋಗ್ಯ ವಿಚಾರಣೆಗೆ ಬಂದಿದ್ದ ಸಂಸದ ಪುಟ್ಟರಾಜು ಅವರು ಕೂಡ ಕುಮಾರಸ್ವಾಮಿಯವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದರು.
ಇನ್ನು ವಿಕ್ರಂ ಅಸ್ಪತ್ರೆಯ ವೈದ್ಯ ಡಾ. ಸತೀಶ್ ಅವರು ಕುಮಾರ ಸ್ವಾಮಿಯವರಿಗೆ ಚಿಕಿತ್ಸೆ ನೀಡುತ್ತಿದ್ದು ಕುಮಾರ ಸ್ವಾಮಿಯವರಿಗೆ ಯಾವುದೇ ತೊಂದರೆ ಇಲ್ಲ. ಮೊದಲಿಗೆ ಜ್ವರ , ಉಸಿರಾಟದ ತೊಂದರೆ ಇತ್ತು. ನಂತರ ಸ್ಕ್ಯಾನಿಂಗ್ ಇನ್ನಿತರ ಚಿಕಿತ್ಸೆ ನಡೆಸಿದ್ದೆವು. ಅವರ ಕುಟುಂಬದವರು ಕೂಡ ಅವರ ಜೊತೆ ಇದ್ದಾರೆ. ವಿಶ್ರಾಂತಿ ಹಿನ್ನಲೆ ಅವರನ್ನ ನೋಡೋದಕ್ಕೆ ಅವರ ಸ್ನೇಹ ಬಳಗ ಬರುತ್ತಿರುವುದನ್ನ ಅವೈಡ್ ಮಾಡೋದಕ್ಕೆ ಕುಟುಂಬದವರಿಗೆ ಸಲಹೆ ನೀಡಿದ್ದೇವೆ. ಮನೆಗೆ ಹೋದರೆ ಮತ್ತೆ ಅವರು ವಿಶ್ರಾಂತಿ ಪಡೆಯೋದಕ್ಕಾಗೋದಿಲ್ಲ. ಈ ಹಿನ್ನಲೆ ಆಸ್ಪತ್ರೆಯೇ ಎರಡು ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದೇವೆ. ಈಗಾಗಲೆ ವಾರ್ಡ್ಗೆ ಶಿಫ್ಟ್ ಮಾಡಲಾಗಿದ್ದು . ಎರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡ್ತಿವಿ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.