ಎಚ್ ಡಿ ಎಫ್ ಸಿ ಎಟಿಎಂ ಬಳಕೆದಾರರೇ ಎಚ್ಚರ : ನೀವಿದನ್ನು ಗಮನಿಸಲೇಬೇಕು

By Web Desk  |  First Published Oct 19, 2018, 9:41 AM IST

ನೀವು ಎಚ್ ಡಿ ಎಫ್ ಸಿ ಎಟಿಎಂ ಬಳಕೆದಾರರಾಗಿದ್ದಲ್ಲಿ ನೀವಿದನ್ನು ಗಮನಿಸಲೇಬೇಕು. ಈ ಬಗ್ಗೆ ನೀವು ಎಚ್ಚರಿಕೆವಹಿಸದಿದ್ದಲ್ಲಿ ಸಮಸ್ಯೆ ಎದುರಿಸಬೇಕಾದೀತು.


ನವದೆಹಲಿ :  ನೀವು ಎಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಾಗಿದ್ದೀರಾ ಹಾಗಾದ್ರೆ. ನಿಮಗಿಲ್ಲಿದೆ ಎಚ್ಚರಿಕೆ ಸಂದೇಶ. ಕೆಲ ದಿನಗಳಿಂದ ಎಚ್ ಡಿ ಎಫ್ ಸಿ ಬ್ಯಾಂಕ್  ಎಟಿಎಂ ಕಾರ್ಡ್ ಬಳಕೆ ಮಾಡಿದಾಗ  ಖಾತೆಯಿಂದ ಹಣವು ಡೆಬಿಟ್ ಆಗಿರುವ ಸಂದೇಶ ಮಾತ್ರ ಲಭ್ಯವಾಗುತ್ತಿದೆ. ಆದರೆ ಎಟಿಎಂ ನಲ್ಲಿ ಹಣ ಮಾತ್ರ ಸಿಗುತ್ತಿಲ್ಲ 

ಈ ರೀತಿ ಸಮಸ್ಯೆಯನ್ನು ಅನೇಕ ಗ್ರಾಹಕರು ಎದುರಿಸಿದ್ದು, ಹೇಗೆ ಡೆಬಿಟ್ ಆಗುತ್ತಿದೆ ಎನ್ನುವುದು ಮಾತ್ರ ತಿಳಿಯುತ್ತಿಲ್ಲ. 

Latest Videos

undefined

ಇನ್ನು ಎಸ್ ಬಿಐ ಎಟಿಎಂ ಅನ್ನು ಎಚ್ ಡಿ ಎಫ್ ಸಿ ಬ್ಯಾಂಕ್ ಎಟಿಎಂನಲ್ಲಿ ಬಳಕೆ ಮಾಡಿದಾಗಲೂ ಕೂಡ ಇದೇ ರೀತಿಯ ಸಮಸ್ಯೆ ಕಂಡು ಬಂದಿದೆ. 

ನೀವು ಮಾಡಬೇಕಾದ್ದೇನು..?

ಮೊದಲು ಹಣ ತೆಗೆಯಲು ಹೋದಾಗ ಡೆಬಿಟೆಡ್ ಎಂದು ಸಂದೇಶ ಬಂದು ಹಣ ಕೈ ಸೇರದಿದ್ದಲ್ಲಿ ಅಲ್ಲಿರುವ ಸೆಕ್ಯೂರಿಟಿ ಗಾರ್ಡ್ ಗೆ ಮಾಹಿತಿ ನೀಡಿ. ಸೆಕ್ಯೂರಿಟಿ ಕಾರ್ಡ್ ಇರುವಂತಹ ಎಟಿಎಂಗಳನ್ನೇ ಬಳಸಲು ಮರೆಯದಿರಿ. ಅಲ್ಲದೇ ತಕ್ಷಣ ಬ್ಯಾಂಕ್ ಗೆ ಕರೆ ಮಾಡಿ. 

ಇನ್ನು ಎಟಿಎಂ ನಲ್ಲಿ ಇರುವ ಡ್ರಾಪ್ ಬಾಕ್ಸ್ ನಲ್ಲಿ ನಿಮ್ಮ ಸಮಸ್ಯೆ ಬಗ್ಗೆ ಬರೆದು ಹಾಕುವುದನ್ನು ಮರೆಯದಿರಿ. ಅಲ್ಲದೇ  ತಕ್ಷಣ ಬ್ಯಾಂಕ್ ಗೆ ತೆರಳಲು ಸಾಧ್ಯವಾದರೆ ತೆರಳಿ ಈ ಬಗ್ಗೆ ತಿಳಿಸಿ.  ಇಲ್ಲವಾದಲ್ಲಿ ಕಸ್ಟಮರ್ ಕೇರ್ ಸಂಪರ್ಕವನ್ನಾದರೂ ಸಾಧಿಸಿ.

click me!