ಎಚ್‌ಡಿಎಫ್‌ಸಿ ಬ್ಯಾಂಕ್‌ ವಿರುದ್ಧ 1250 ಕೋಟಿ ವಂಚನೆ ಆರೋಪ

Published : Jun 11, 2025, 06:09 AM IST
HDFC

ಸಾರಾಂಶ

ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ವಿರುದ್ಧ ಮುಂಬೈನ ಪ್ರಸಿದ್ಧ ಲೀಲಾವತಿ ಆಸ್ಪತ್ರೆ ನಡೆಸುವ ಲೀಲಾವತಿ ಟ್ರಸ್ಟ್‌ 1250 ಕೋಟಿ ರು. ವಂಚನೆ ಗಂಭೀರ ಆರೋಪ ಮಾಡಿದೆ.

 ನವದೆಹಲಿ: ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ವಿರುದ್ಧ ಮುಂಬೈನ ಪ್ರಸಿದ್ಧ ಲೀಲಾವತಿ ಆಸ್ಪತ್ರೆ ನಡೆಸುವ ಲೀಲಾವತಿ ಟ್ರಸ್ಟ್‌ 1250 ಕೋಟಿ ರು. ವಂಚನೆ ಗಂಭೀರ ಆರೋಪ ಮಾಡಿದೆ. ಜೊತೆಗೆ ಬ್ಯಾಂಕ್‌ ಸಿಇಒ ವಜಾಕ್ಕೂ ಒತ್ತಾಯಿಸಿದೆ. ಇದು ಎರಡೂ ಸಂಸ್ಥೆಗಳ ನಡುವಿನ ಜಟಾಪಟಿಗೆ ನಾಂದಿ ಹಾಡಿದೆ.

ಲೀಲಾವತಿ ಆಸ್ಪತ್ರೆಯ ಸಿಇಒ ಪರಂಬೀರ್‌ ಸಿಂಗ್‌ ಮತ್ತು ಲೀಲಾವತಿ ಟ್ರಸ್ಟ್‌ನ ಖಾಯಂ ಟ್ರಸ್ಟಿ ಪ್ರಶಾಂತ್ ಮೆಹ್ತಾ ಸುದ್ದಿಗೋಷ್ಠಿ ನಡೆಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಇಒ ಮತ್ತು ಎಂಡಿ ಆಗಿರುವ ಶಶಿಧರ್ ಜಗದೀಶನ್ ಮತ್ತು ತಮ್ಮ ಟ್ರಸ್ಟ್‌ನ ಮಾಜಿ ಟ್ರಸ್ಟಿಗಳಾದ ಚಿಂತನ್ ಮೆಹ್ತಾ, ನಿಕೇತ್ ಮೆಹ್ತಾ ಮತ್ತು ರಶ್ಮಿ ಮೆಹ್ತಾರ ವಿರುದ್ಧ ಹಣ ದುರುಪಯೋಗ ಸೇರಿದಂತೆ ಹಲವು ಆಪಾದನೆಗಳನ್ನು ಹೊರಿಸಿದ್ದಾರೆ.

ಕಳೆದ 20 ವರ್ಷಗಳಲ್ಲಿ ಬ್ಯಾಂಕ್‌ನಲ್ಲಿ 1,250 ಕೋಟಿ ರು.ಗೂ ಅಧಿಕ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಜೊತೆಗೆ ಹಣ ದುರುಪಯೋಗ ಪ್ರಕರಣದಲ್ಲಿ 2023ರಲ್ಲೇ ಬ್ಯಾಂಕ್ ಸಿಇಒ ಶಶಿಧರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರೂ ಅವರ ವಿರುದ್ಧ ಬ್ಯಾಂಕ್‌ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೂಡಲೇ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಎಚ್‌ಡಿಎಫ್‌ಸಿ ಪ್ರತಿಕ್ರಿಯೆ:

ಲೀಲಾವತಿ ಟ್ರಸ್ಟ್‌ನ ಆರೋಪ ಆಧಾರರಹಿತ ಎಂದಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌, ಟ್ರಸ್ಟಿ ಪ್ರಶಾಂತ್‌ ಮೆಹ್ತಾ ಒಡೆತನದ ಕಂಪನಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 1995ರಲ್ಲಿ ಸಾಲ ಪಡೆದಿದ್ದು ಅದೀಗ 65 ಕೋಟಿಗೆ ತಲುಪಿದೆ. ಅದರ ಪಾವತಿ ತಪ್ಪಿಸಲು ನಡೆಸಿದ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಬ್ಯಾಂಕ್‌ ಮತ್ತು ಸಿಇಒ ವಿರುದ್ಧ ವೃಥಾ ಆರೋಪ ಮಾಡುತ್ತಿದೆ ಎಂದು ತಿರುಗೇಟು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ