
ಹಾಸನ(ಸೆ.27): ಎರಡು ರಾಷ್ಟೀಯ ಪಕ್ಷಗಳು ಚುನಾವಣೆ ಉತ್ಸಾಹದಲ್ಲಿ ನಮ್ಮ ಬಗ್ಗೆ ಹಲವಾರು ವಿಷಯಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಿಡಿದೆದ್ದು ಸಂಘಟನೆ ಮಾಡುವುದು ಗೊತ್ತಿದೆ. ಪಕ್ಷವನ್ನು ಕೀಳಾಗಿ ಕಾಣುವವರಿಗೆ ತಕ್ಕ ಉತ್ತರ ಕೊಡುತ್ತೇನೆ. ಇದೇ ವೇಳೆ ಬಿಬಿಎಂಪಿ ಮೇಯರ್ ಚುನಾವಣೆ ವಿಷಯ ಸಂಬಂಧ ಪ್ರತಿಕ್ರಿಯಿಸಿದ ಅವರು ನಮ್ಮಲ್ಲಿ ಗೊಂದಲ ಇಲ್ಲ. ಕಾಂಗ್ರೆಸ್'ನಲ್ಲಿ ಕೆಲ ಗೊಂದಲಗಳಿವೆ. ಉಪಮೇಯರ್ ನಮಗೆ ಕೊಡುತ್ತೇವೆಂದು ಮೊದಲಿಗೆ ಹೇಳಿದ್ದರು. ಈಗ ಅವರ ಪಕ್ಷದಲ್ಲೆ ಒಮ್ಮತ ಇಲ್ಲ ಎಂದು ಆಡಳಿತ ಪಕ್ಷದ ಭಿನ್ನಾಭಿಪ್ರಾಯ ಬಗ್ಗೆ ತಿಳಿಸಿದರು.
ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದು,ಎರಡು ವಾರದ ನಂತರ ಅಖಾಡಕ್ಕೆ ಇಳಿಯಲಿದ್ದಾರೆ. ಮತ್ತೆ ಪಕ್ಷ ಸಂಘಟನೆಗೆ ಧುಮುಕುತ್ತಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.