ಕಲಾಪ ವಿಸ್ತರಣೆ ಬ್ಯಾಡಾ ಬುದ್ದಿ: ರೇವಣ್ಣ ಅಮಾವಸ್ಯೆ ರಂಪ!

Published : Jul 12, 2018, 06:37 PM IST
ಕಲಾಪ ವಿಸ್ತರಣೆ ಬ್ಯಾಡಾ ಬುದ್ದಿ: ರೇವಣ್ಣ ಅಮಾವಸ್ಯೆ ರಂಪ!

ಸಾರಾಂಶ

ಕಲಾಪ ಸಲಹಾ ಸಮಿತಿ ಸಭೆಯಲ್ಲಿ ರೇವಣ್ಣ ನಗೆಪಾಟಲು ಅಮವಾಸ್ಯೆಗೆ ಕಲಾಪ ಬೇಡ ಎಂದು ರೇವಣ್ಣ ಪಟ್ಟು ಅಧಿವೇಶನ ವಿಸ್ತರಾಣೆಗೆ ಬೇಡ ಎಂದು ಗೋಗರೆದ ರೇವಣ್ಣ ಅಧಿವೇಶನ ವಿಸ್ತರಿಸಲು ಒಪ್ಪಿಗೆ ನೀಡಿದ ಸಿಎಂ ರೇವಣ್ಣ ಸ್ಥಿತಿ ನೋಡಿ ಗಹಗಹಿಸಿ ನಕ್ಕ ಸದಸ್ಯರು  

ಬೆಂಗಳೂರು(ಜು.12): ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಇಂದು ಕಲಾಪ ಸಲಹಾ ಸಮಿತಿ ಸದಸ್ಯರ ಮುಂದೆ ನಗೆಪಾಟಲಿಗೆ ಈಡಾದ ಘಟನೆ ನಡೆದಿದೆ.

ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸುವ ಕುರಿತು ಇಂದು ಸ್ಪೀಕರ್ ಕೊಠಡಿಯಲ್ಲಿ ಕಲಾಪ ಸಲಹಾ ಸಮಿತಿ ಸಭೆ ಸೇರಿತ್ತು. ಅಧಿವೇಶನವನ್ನು ವಿಸ್ತರಿಸಲು ಎಲ್ಲ ಸದಸ್ಯರು ಸಹಮತ ಕೂಡ ಸೂಚಿಸಿದರು. ಆಗ ಎದ್ದು ನಿಂತ ರೇವಣ್ಣ, ಸ್ಪೀಕರ್ ಅವರನ್ನು ಉದ್ದೇಶಿಸಿ ‘ಬುದ್ದಿ ನಾಳೆ ಅಮವಾಸ್ಯೆ ಇದೆ, ಹೀಗಾಗಿ ಕಲಾಪ ನಡೆಸುವುದು ಬೇಡ’ ಎಂದು ಮನವಿ ಮಾಡಿದರು.

ಅಲ್ಲದೇ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ‘ನೀವೂ ಅಮಾವಸ್ಯೆ ಪೂಜೆ ಮಾಡಿ’ ಎಂದು ರೇವಣ್ಣ ಮನವಿ ಮಾಡಿದರು. ಕಲಾಪ ಬೇಡ ಎಂದು ರೇವಣ್ಣ ಪಟ್ಟು ಹಿಡಿದಿದ್ದಕ್ಕೆ ಸಿಎಂ ಎಚ್.ಡಿ. ಕುಮಾರಸ್ವಾಮಿ ತಲೆ ಚಚ್ಚಿಕೊಂಡ ಪ್ರಸಂಗ ಕೂಡ ನಡೆಯಿತು.

ಇದಕ್ಕೆ ನಗುತ್ತಲೇ ಉತ್ತರಿಸಿದ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಿಎಂ ಗುಂಡೂರಾವ್ ಮಹಾಲಯ ಅಮವಾಸ್ಯೆ ದಿನ ಹುಟ್ಟಿ ಸಿಎಂ ಪಟ್ಟ ಏರಲಿಲ್ಲವೇ? ಎಂದು ಪ್ರಶ್ನಿಸಿದರು.

ಕೊನೆಯಲ್ಲಿ ಸಿಎಂ ಕಲಾಪವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಲು ಒಪ್ಪಿಗೆ ನೀಡುತ್ತಿದ್ದಂತೇ ರೇವಣ್ಣ ಗಂಟು ಮುಖ ಹಾಕಿಕೊಂಡು ಸುಮ್ಮನೆ ಕುಳಿತುಕೊಂಡರು. ರೇವಣ್ಣ ಅವರ ಸ್ಥಿತಿ ಕಂಡು ಸಮಿತಿ ಸದಸ್ಯರು ಗಹಗಹಿಸಿ ನಕ್ಕರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿ ಮೋದಿ ಸಮಾಧಿ ಉದ್ಘೋಷದ ವಿರುದ್ಧ ಸಂಸತ್ತಲ್ಲಿ ಗದ್ದಲ: ಕ್ಷಮೆಗೆ ಆಗ್ರಹ
ಯಾವ ರಾಜ್ಯದಲ್ಲಿ ಗರಿಷ್ಠ ಬೆಲೆಗೆ ಮಾರಾಟವಾಗುತ್ತೆ ಪೆಟ್ರೋಲ್? ಕಡಿಮೆಗೆ ಎಲ್ಲಿ ಸಿಗುತ್ತೆ?