
ಮುಂಬೈ[ಜು.14]: ಮೈತ್ರಿ ಸರ್ಕಾರ ಪತನದ ಹಾದಿಯಲ್ಲಿದೆ. ಮುಂಬೈ ಸೇರಿರುವ ಅತೃಪ್ತ ನಾಯಕರ ಟೀಂ ಮರಳಿ ಬರುವ ಯಾವುದೇ ಲಕ್ಷಣಗಳಿಲ್ಲ. ಹೀಗಿರುವಾಗ ರಾಜೀನಾಮೆ ಹಿಂಪಡೆಯುತ್ತೇನೆ ಎಂದು ಮೈತ್ರಿ ಸರ್ಕಾರಕ್ಕೆ ಕೊಂಚ ನೆಲಮ್ಮದಿ ನೀಡಿದ್ದ ಶಾಸಕ ಎಂಟಿಬಿ ನಾರಾಜ್ ಕೂಡಾ ಕೈ ನಾಯಕರ ಕಣ್ಣೆದುರಢೇ ಮುಂಬೈಗೆ ಹಾರಿದ್ದಾರೆ. ಅತ್ತ ಮಾಜಿ ಶಾಸಕ ಎನ್ ರಾಜಣ್ಣ ರೇವಣ್ಣ ವಿರಿದ್ಧ ಕಿಡಿ ಕಾರಿದ್ದಾರೆ. ಇಂತಹ ಗೊಂದಲಮಯ ಪರಿಸ್ಥಿತಿ ನಡುವೆಯೇ, ಕಾಂಗ್ರೆಸ್ ಶಾಸಕ ಮುನಿರತ್ನ ಕೂಡಾ ಲೋಕೋಪಯೋಗಿ ಸಚಿವ ಎಚ್. ಡಿ. ರೇವಣ್ಣ ವಿರುದ್ಧ ಕಿಡಿ ಕಾರಿದ್ದಾರೆ.
'ಅವ್ರು ರೇವಣ್ಣ ಅಲ್ಲಾ ರಾವಣ': ಅಸಮಾಧಾನ ಹೊರಹಾಕಿದ ಕೈ ನಾಯಕ!
ಹೌದು ಎನ್. ರಾಜಣ್ಣ ಬೆನ್ನಲ್ಲೇ ಇದೀಗ ಮುನಿರತ್ನ ಕೂಡಾ ಟೆಂಪಲ್ ರನ್ ನಡೆಸಿ ಸರ್ಕಾರ ಉಳಿಸಲು ಯತ್ನಿಸುತ್ತಿರುವ ಎಚ್. ಡಿ. ರೇವಣ್ಣ ವಿರುದ್ಧ ಗರಂ ಆಗಿದ್ದಾರೆ. 'ಸಮ್ಮಿಶ್ರ ಸರ್ಕಾರದ ಎಲ್ಲ ಸಮಸ್ಯೆಗಳಿಗೂ ರೇವಣ್ಣನೇ ಕಾರಣ' ಎಂದಿರುವ ಮುನಿರತ್ನ, 'ಇರೋಬರೋ ಎಲ್ಲ ಇಲಾಖೆಗಳಲ್ಲಿ ರೇವಣ್ಣ ಮೂಗು ತೂರಿಸಿದ್ರು, ಪಿಡ್ಲ್ಯುಡಿ ಇಲಾಖೆ ಬಿಟ್ಟು ಎಲ್ಲ ಇಲಾಖೆಗೆ ಕೈ ಹಾಕಿ ಗಲೀಜು ಮಾಡಿದ್ರು. ರೇವಣ್ಣ ಬಗ್ಗೆ ಸಿಎಂ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಲಿಲ್ಲ. ನಮ್ಮ ದೂರುಗಳಿಗೆ ಸಿಎಂ ಕುಮಾರಸ್ವಾಮಿ ಕಿವಿಗೊಡಲೇ ಇಲ್ಲ' ಎಂದು ಅಸಮಾಧಾನ ಪ್ರಕಟಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಮುನಿರತ್ನ 'ಬೆಂಗಳೂರು ಅಭಿವೃದ್ಧಿಗೆ 24 ಸಾವಿರ ಕೋಟಿ ಕೊಟ್ಟಿರುವುದಾಗಿ ಸಿಎಂ ಹೇಳ್ತಿದ್ದಾರೆ. ನಮ್ಮ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ? ಅಭಿವೃದ್ಧಿ ಕೆಲಸ ಕುಂಠಿತವಾಗಿ ಕ್ಷೇತ್ರದ ಜನತೆಗೆ ಮುಖ ತೋರಿಸದಂತಾಗಿದೆ' ಎಂದು ದೂರಿದ್ದಾರೆ.
ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದೇ ಸಂದರ್ಭದಲ್ಲಿ 'ನಾನು ಮುಂಬೈನಲ್ಲಿದ್ದೇನೆ, ಸಿನಿಮಾ ಕೆಲಸಕ್ಕೆ ಬಂದಿದ್ದೇನೆ. ಶಾಸಕರು ಇರುವ ಹೋಟೆಲ್ನಲ್ಲಿ ನಾನಿಲ್ಲ..!. ಆದರೆ ನನ್ನ ಕೆಲಸ ಮುಗಿಸಿ ಅತೃಪ್ತರನ್ನು ಭೇಟಿಯಾಗುವೆ. ನಾವು ರಾಮಲಿಂಗಾರೆಡ್ಡಿ ನಿರ್ಧಾರಕ್ಕೆ ಬದ್ಧ' ಎಂದು ಸ್ಪಷ್ಟನೆ ನೀಡಿದ್ದಾರೆ.
ಒಟ್ಟಾರೆಯಾಗಿ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚುತ್ತಿದ್ದು, ಇದು ಮೈತ್ರಿ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ. ಹೀಗಿದ್ದರೂ ಅಚಿವ ರೇವಣ್ಣ ಮಾತ್ರ ರಾಜ್ಯದೆಲ್ಲೆಡೆ ಟೆಂಪಲ್ ರನ್ ನಡೆಸಿ ಸರ್ಕಾರ ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಹೀಗಿರುವಾಗ ಮುಂದೆ ರಾಜ್ಯ ಸರ್ಕಾರದ ಭವಿಷ್ಯ ಏನಾಗುತ್ತೆ? ಕಾಲವೇ ಉತ್ತರಿಸಬೇಕಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.