
ನಂಜನಗೂಡು: ಬಡವರಿಗಾಗಿ ಹಂಚಿಕೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿರುವ ಮನೆಗಳು, ಶೌಚಾಲಯಗಳು ಎಲ್ಲಿ ಹೋದವು ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ವಸತಿ ಸಚಿವರು ಮೇಕಪ್ ಮಾಡಿಕೊಂಡು, ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಜಾಹೀರಾತು ಕೊಡುತ್ತಿರುವುದೇ ಸಾಧನೆಯೇ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರು ಜಿಲ್ಲೆಯ ವರುಣ ಕ್ಷೇತ್ರದ ಎಸ್.ಹೊಸಕೋಟೆಯಲ್ಲಿ ಶುಕ್ರವಾರ ವಿಕಾಸ ಪರ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತ ನಾಡಿದ ಅವರು ಈ ಬಾರಿಯ ಚುನಾವಣೆ ಧರ್ಮ ಯುದ್ಧವಾಗಿದೆ. ಕಲಿಯುಗದಲ್ಲಿ ಧರ್ಮ ಸಂಸ್ಥಾಪನೆಗೆ 18 ಪರ್ವಗಳು ಬೇಕಿಲ್ಲ, ಕುಮಾರ ಪರ್ವ ಒಂದೇ ಪರ್ವ ಸಾಕು ಎಂದು ಹೇಳಿದರು.
ಬಯಲು ಶೌಚಾಲಯ ಮುಕ್ತ ಎಂದು ಜಾಹೀರಾತು ಹಾಕಿಕೊಳ್ಳುತ್ತೀರಿ. ಆದರೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಇನ್ನೂ ಚೊಂಬು ಹಿಡಿದುಕೊಂಡು ಬಹಿರ್ದೆಸೆಗೆ ರಸ್ತೆ ಬದಿ ಕುಳಿತುಕೊಳ್ಳುತ್ತಾರೆ. ಅವರ ಶೌಚಾಲಯಗಳು ಎಲ್ಲಿ ಹೋದವು? ವಸತಿ ಸಚಿವರು ತುಟಿಗೆ ಲಿಪ್‌ಸ್ಟಿಕ್ ಹಾಕಿಕೊಂಡು ಜಾಹೀರಾತು ನೀಡುತ್ತಿದ್ದಾರೆ.
ಕ್ಯಾಪ್ಶನ್‌ನಲ್ಲಿ ಗುಡಿಸಲಾಯಿತು ಮನೆ ಎಂದು ಹೇಳಿದ್ದೀರಿ. ಎಷ್ಟು ಮನೆ ಗುಡಿಸಿದ್ದೀರಿ ಸಿದ್ದರಾಮಯ್ಯ ನವರೇ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರು ಸಮಾಜ ಕಲ್ಯಾಣ ಇಲಾಖೆಗೆ 85 ಸಾವಿರ ಕೋಟಿ ನೀಡಿದ್ದಾರೆಂದು ಜಾಹೀರಾತು ನೀಡುತ್ತಿದ್ದಾರೆ. ಅವರದೇ ಕ್ಷೇತ್ರದ ಪ.ಜಾತಿಯ ವೃದ್ಧರೊಬ್ಬರಿಗೆ ಮನೆ ಸಿಕ್ಕಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.