
ರಾಮನಗರ(ಆ.05): ಮೊನ್ನೇ ಅಷ್ಟೇ ಹಾಸನದಲ್ಲಿ ರಾಜಕೀಯ ನಿವೃತ್ತಿ ಮಾತುಗಳನ್ನಾಡಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಅದೇ ಮಾತುಗಳನ್ನು ಪುನರುಚ್ಚರಿಸಿದ್ದಾರೆ.
ಇಂದು (ಸೋಮವಾರ) ರಾಮನಗರ ಜಿಲ್ಲೆಯ ತಮ್ಮ ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದು, ತಮ್ಮ ಕಾರ್ಯಕರ್ತರ ಜತೆ ಸ್ವಲ್ಪ ಹೊತ್ತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಮತ್ತೆ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದಾರೆ.
ಕುಮಾರಸ್ವಾಮಿ ಬಾಯಲ್ಲಿ ರಾಜಕೀಯ ನಿವೃತ್ತಿ ಮಾತು: ಏನಂದ್ರು ಕೇಳಿ..?
ನಮ್ಮಿಂದ ಬೆಳೆದವರೇ ಈಗ ನಮಗೆ ಮೋಸ ಮಾಡಿದ್ದಾರೆ. ನಮ್ಮ ಮೇಲೆ ಯಾವುದೇ ಅಪಪ್ರಚಾರ ಬಂದರು ನಂಬಬೇಡಿ
ನನಗೆ ಸಿಎಂ ಸ್ಥಾನ ಬೇಕಿಲ್ಲ, ನಿಮ್ಮೆಲ್ಲರ ಪ್ರೀತಿ ಬೇಕು ಅಷ್ಟೇ. ಮಾಧ್ಯಮದಲ್ಲಿ ಬರುವ ವರದಿಗಳನ್ನ ನೋಡಿ ನೀವು ತೀರ್ಮಾನ ಮಾಡಿದರೆ ನಿಮ್ಮ ಕಾಲಿಗೆ ನಮಸ್ಕರಿಸಿ ರಾಜಕೀಯದಿಂದ ದೂರ ಹೋಗುತ್ತೇನೆ ಎಂದು ಹೇಳಿದರು.
ಮಾಧ್ಯಮದಲ್ಲಿ ಯಾವುದೋ ಒಂದು ಕಾರ್ಯಕ್ರಮ ನೋಡಿ ನನಗೆ ಎಡಭಾಗದ ಸ್ವಾಧೀನವೇ ಹೋಗಬೇಕಿತ್ತು ನಿಮ್ಮಂಥವರ ತಾಯಂದಿರ ಆರ್ಶೀವಾದದಿಂದ ಬದುಕಿದ್ದೇನೆ ಎಂದು ಭಾಷಣದುದ್ದಕ್ಕೂ ಮಾಧ್ಯಮದವರ ವಿರುದ್ಧ ಕಿಡಿಕಾರಿದರು.
ದೇವೇಗೌಡರು ಗ್ರಾಮಪಂಚಾಯತ್ ನಿಂದ ಕೆಂಪುಕೋಟೆಯವರೆಗೂ ನೋಡಿದ್ದಾರೆ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ, ನನಗೆ ನೀವು ಶಕ್ತಿ ಕೊಟ್ಟಿದ್ದೀರಿ. ನಾನು ಯಾವ ಕುಟುಂಬದ ತಲೆಹೊಡೆದು ರಾಜಕೀಯಕ್ಕೆ ಬಂದಿಲ್ಲ. ಲೇಔಟ್ ಮಾಡಲು ರಾಜಕೀಯಕ್ಕೆ ಬಂದಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸಿಪಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.