
ಮಂಡ್ಯ[ಫೆ.05] ರೆಬಲ್ ಸ್ಟಾರ್ ಪತ್ನಿ ಸುಮಲತಾ ಅಂಬರೀಶ್ ಬಗ್ಗೆ ಜೆಡಿಎಸ್ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ನೀಡಿದ ಒಂದು ಹೇಳಿಕೆ ಮಾಧ್ಯಮಗಳಲ್ಲಿ ಮೊದಲು ಚರ್ಚೆಗೆ ವೇದಿಕೆಯಾಗಿತ್ತು. ಇದಾದ ಮೇಲೆಸೋಶಿಯಲ್ ಮೀಡಿಯಾ ಸುದ್ದಿಯನ್ನು ತನ್ನ ಬಳಕೆಗೆ ತೆಗೆದುಕೊಂಡಿತು.
ಸುಮಲತಾ ಗೌಡ್ತಿ ಅಲ್ಲ ಎಂದ ಶ್ರೀಕಂಠೇಗೌಡರ ವಿರುದ್ಧ ಅಂಬರೀಶ್ ಅಭಿಮಾನಿಗಳು ನಿನ್ನೆ ಪ್ರತಿಭಟನೆ ನಡೆಸಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಸೋಶಿಯಲ್ ಮೀಡಿಯಾ ಸಿಎಂ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ವಿಚಾರ ಎತ್ತಿಕೊಂಡಿದ್ದಾರೆ.
ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಎಂದಿದ್ದೇ ಇದೆಲ್ಲದಕ್ಕೆ ಕಾರಣವಾಯ್ತು
ತೆಲುಗು ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಕುಮಾರಸ್ವಾಮಿ ನನ್ನ ಹೆಂಡತಿ ಸಹ ತೆಲಗು ಕುಟುಂಬದಿಂದ ಬಂದವರು ಎಂದು ಹೇಳಿದ್ದರು. ನಿಖಿಲ್ ಕುಮಾರಸ್ವಾಮಿ ಸಹ ಆ ಸಂದರ್ಶನದಲ್ಲಿ ಇದ್ದಾರೆ.
ಎಚ್ ಡಿ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ತೆಲುಗು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದನ್ನು ಹೊರಗೆಳೆದು, ನೋಡಿ ಸ್ವಾಮಿ, ನಿಮ್ಮ ಪತ್ನಿಯವರು ಎಲ್ಲಿಯವರು? ಎಂದು ಕಾಲೆಳೆದಿದ್ದು ಅಲ್ಲದೇ ಟ್ರೋಲ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.