
ದಿಲ್ಲಿಗೆ ಬಂದಿದ್ದ ಸಿದ್ದರಾಮಯ್ಯ ಅವರಿಗೆ ಪತ್ರಕರ್ತರು ‘ಸೀತಾರಾಮ ಕಲ್ಯಾಣ ಹೇಗಿದೆ’ ಎಂದು ಕೇಳಿದಾಗ ಉತ್ತರ ಕೊಡದ ಸಿದ್ದು, ಸುಮ್ಮನೆ ಅತ್ತಿತ್ತ ನೋಡುತ್ತಿದ್ದರು. ಆಗ ಪತ್ರಕರ್ತರೊಬ್ಬರು, ‘ಸಮ್ಮಿಶ್ರ ಸರ್ಕಾರ ಇದ್ದ ಹಾಗಿದೆ ಅಲ್ವಾ? ಸರಿಯಾಗಿ ನಡೆಯದೇ ಇದ್ದರೂ ಕೂಡ ಹೊಗಳಬೇಕು’ ಎಂದಾಗ ಪಕ್ಕದಲ್ಲಿ ಇದ್ದ ಜಮೀರ್ ಅಹ್ಮದ್, ಥಮ್ಸ್ ಅಪ್ ಮಾಡುತ್ತಾ ‘ಬರೋಬರ್ ಬೋಲಾ ಸಾಹಬ್' ಎಂದರು.
ಆದರೆ ಸಿದ್ದು ಬಾಯಿಯಿಂದ ಮಾತ್ರ ಚಿತ್ರದ ಬಗ್ಗೆ ಒಂದು ವಾಕ್ಯವೂ ವಿಮರ್ಶೆ ಬರಲಿಲ್ಲ. ಆಗ ಪತ್ರಕರ್ತರು ಜಮೀರ್ ಭಾಯಿಗೆ, ‘ಹೇಗಿದೆ ನಿಮ್ಮ ಮಿತ್ರನ ಮಗನ ಚಿತ್ರ’ ಎಂದಾಗ ಥಟ್ಟನೆ ಉತ್ತರಿಸಿದ ಜಮೀರ್, ‘ಪುರಾನಾ ದೋಸ್‌್ತ ಸಾಹಬ್’ ಎಂದರು. ಆಗ ಮಾತನಾಡಿದ ಸಿದ್ದು, ‘ಪಾಲಿಟಿಕ್ಸ್‌ನಲ್ಲಿ ಯಾರೂ ಸ್ನೇಹಿತರಲ್ಲ, ಶತ್ರುಗಳೂ ಅಲ್ಲ ನಡೀರಿ’ ಎಂದು ಎದ್ದು ಹೊರಟರು.
[ಪ್ರಶಾಂತ್ ನಾತುರವರ 'ಇಂಡಿಯಾ ಗೇಟ್' ಅಂಕಣದ ಆಯ್ದ ಭಾಗ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ