ದೇವೇಗೌಡ ಏಕತಾ ಪ್ರತಿಮೆ ಸಂದರ್ಶನಕ್ಕೆ ಪ್ರಧಾನಿ ಹರ್ಷ!

By Web DeskFirst Published Oct 7, 2019, 12:02 PM IST
Highlights

ದೇವೇಗೌಡ ಏಕತಾ ಪ್ರತಿಮೆ ಸಂದರ್ಶನಕ್ಕೆ ಪ್ರಧಾನಿ ಹರ್ಷ!|  ಶನಿವಾರ ಗುಜರಾತ್‌ನ ಕೆವಾಡಿಯಾಗೆ ಭೇಟಿ ನೀಡಿ, ಇಲ್ಲಿನ ಸರೋವರದ ಅಭಿಮುಖವಾಗಿ ನಿರ್ಮಿಸಿರುವ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಪ್ರತಿಮೆ ವೀಕ್ಷಿಸಿದ್ದ ಗೌಡರು

ನವದೆಹಲಿ[ಅ.07]: ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ವಿಶ್ವದ ಅತೀ ಎತ್ತರದ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ಏಕತಾ ಪ್ರತಿಮೆ ಸಂದರ್ಶಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ, ಮಾಜಿ ಪ್ರಧಾನಿ ದೇವೇಗೌಡಜಿ ಅವರು ಏಕಾತಾ ಪ್ರತಿಮೆ ಸಂದರ್ಶಿಸಿದ್ದನ್ನು ನೋಡಿ ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

Happy to see our former PM Shri Ji visit the ‘Statue of Unity.’ https://t.co/GVWMo7UIow

— Narendra Modi (@narendramodi)

ವಿಶ್ವದ ಅತಿದೊಡ್ಡ ಪಟೇಲರ ಪ್ರತಿಮೆ ವೀಕ್ಷಿಸಿದ ದೇವೇಗೌಡ

ಮಾಜಿ ಪ್ರಧಾನಿ ದೇವೇಗೌಡ ಅವರು ಶನಿವಾರ ಗುಜರಾತ್‌ನ ಕೆವಾಡಿಯಾಗೆ ಭೇಟಿ ನೀಡಿ, ಇಲ್ಲಿನ ಸರೋವರದ ಅಭಿಮುಖವಾಗಿ ನಿರ್ಮಿಸಿರುವ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಬೃಹತ್‌ ಪ್ರತಿಮೆ ವೀಕ್ಷಿಸಿದ್ದರು. ಬಳಿಕ ತಮ್ಮ ಭೇಟಿಯ ಚಿತ್ರಗಳನ್ನು ಟ್ವೀಟರ್‌ ಮೂಲಕ ಹಂಚಿಕೊಂಡಿದ್ದರು.

Visited Statue of Unity at Sardar Sarovar Dam, Gujarat.
ಸರ್ದಾರ್ ಸರೋವರ ಅಣೆಕಟ್ಟೆಯ ಬಳಿ ನಿರ್ಮಿಸಿರುವ ಏಕತಾ ಪ್ರತಿಮೆಗೆ ಭೇಟಿ ನೀಡಿದ ಸಂದರ್ಭ. pic.twitter.com/XG9Msr7CBf

— H D Devegowda (@H_D_Devegowda)

182 ಮೀಟರ್‌ ಎತ್ತರದ ಪ್ರತಿಮೆಯನ್ನು 20,000 ಚದುರ ಮೀಟರ್‌ ವಿಸ್ತೀರ್ಣ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾಗಿದೆ. ಕಳೆದ ವರ್ಷ ಪಟೇಲರ 143ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು. ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಇದೂ ಒಂದಾಗಿತ್ತು.

click me!