ಕಲಬುರಗಿಗೆ ಬರುತ್ತಿದ್ದ ವಿಮಾನ ಪತನ, ಇಬ್ಬರು ವಿದ್ಯಾರ್ಥಿ ಪೈಲಟ್ ಬಲಿ!

Published : Oct 07, 2019, 10:53 AM IST
ಕಲಬುರಗಿಗೆ ಬರುತ್ತಿದ್ದ ವಿಮಾನ ಪತನ, ಇಬ್ಬರು ವಿದ್ಯಾರ್ಥಿ ಪೈಲಟ್ ಬಲಿ!

ಸಾರಾಂಶ

ವಿಮಾನ ಪತನ: ಇಬ್ಬರು ತರಬೇತಿ ಪೈಲಟ್‌ಗಳು ಬಲಿ| ಮೃತರನ್ನು ಪ್ರಕಾಶ್‌ ವಿಶಾಲ್‌ ಹಾಗೂ ಅಮನ್‌ಪ್ರೀತ್‌ ಎಂದು ಗುರುತಿಸಲಾಗಿದೆ

ಹೈದರಾಬಾದ್‌[ಅ.07]: ತೆಲಂಗಾಣದ ವಿಕರಬಾದ್‌ ಜಿಲ್ಲೆಯ ಸುಲ್ತಾನ್‌ ಪುರ ಎಂಬಲ್ಲಿ ಭಾನುವಾರ ಹೊಲದಲ್ಲಿ ವಿಮಾನ ಪತನಗೊಂಡು, ಇಬ್ಬರು ತರಬೇತಿ ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ಎಸ್ಪಿ ನಾರಾಯಣ ತಿಳಿಸಿದ್ದಾರೆ.

ಮೃತರನ್ನು ಪ್ರಕಾಶ್‌ ವಿಶಾಲ್‌ ಹಾಗೂ ಅಮನ್‌ಪ್ರೀತ್‌ ಎಂದು ಗುರುತಿಸಲಾಗಿದ್ದು, ಇಬ್ಬರೂ ಹೈದರಾಬಾದ್‌ನ ರಾಜೀವ್‌ಗಾಂಧಿ ವಿಮಾನಯಾನ ಅಕಾಡೆಮಿಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ಹೈದರಾಬಾದ್‌ನ ಬೇಗಂ ಪೇಟ್‌ ವಿಮಾನ ನಿಲ್ದಾಣದಿಂದ 100 ಕಿ.ಮಿ ದೂರದಲ್ಲಿ ದೂರದಲ್ಲಿ ದುರಂತ ಸಂಭವಿಸಿದ್ದು, ಪತನಕ್ಕೆ ನೈಜ ಕಾರಣ ತಿಳಿದು ಬಂದಿಲ್ಲ. ನ.18ರಂದು ಇದೇ ಸಂಸ್ಥೆಯ ತರಬೇತಿ ವಿಮಾನ ತುರ್ತು ಭೂ ಸ್ಪರ್ಶ ಮಾಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!
ಗೃಹ ಸಚಿವ ಅಮಿತ್‌ ಶಾ - ರಾಹುಲ್ ಗಾಂಧಿ ಮತಚೋರಿ ಸಮರ