ದೋಸ್ತಿ ಸರ್ಕಾರ ಪತನದ ರೂವಾರಿಗಳಿಗೆ ಭಾರೀ ಖೆಡ್ಡಾ : HDD ಮಾಸ್ಟರ್ ಪ್ಲಾನ್

Published : Jul 25, 2019, 03:59 PM ISTUpdated : Jul 25, 2019, 04:09 PM IST
ದೋಸ್ತಿ ಸರ್ಕಾರ ಪತನದ ರೂವಾರಿಗಳಿಗೆ ಭಾರೀ ಖೆಡ್ಡಾ : HDD ಮಾಸ್ಟರ್ ಪ್ಲಾನ್

ಸಾರಾಂಶ

ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ದೋಸ್ತಿ ಸರ್ಕಾರ ಪತನವಾಗಿದೆ. ಅತ್ತ ಬಿಜೆಪಿ ಸರ್ಕಾರರಚನೆ ಮಾಡಲು ಸಿದ್ಧವಾಗುತ್ತಿದೆ. ಇದೇ ವೇಳೆ ಸರ್ಕಾರ ಉರುಳಲು ಕಾರಣರಾದ ರೆಬೆಲ್ಸ್ ಗೆ ಭರ್ಜರಿ ಖೆಡ್ಡಾ ತೋಡಲಾಗುತ್ತಿದೆ.

ಬೆಂಗಳೂರು [ಜು.25] :  ರಾಜ್ಯದಲ್ಲಿ ಅತೃಪ್ತರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಪತನವಾಗಿದೆ. ಪತನದ ರೂವರಿಗಳಿಗೆ ಜೆಡಿಎಸ್ ಹಿರಿಯ ನಾಯಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಖೆಡ್ಡಾ ಸಿದ್ಧಮಾಡಿದ್ದಾರೆ. 

ಗೌಡರ ಹಿಟ್ ಲಿಸ್ಟ್ ನಲ್ಲಿ ಎಲ್ಲಾ ರೆಬೆಲ್ ಶಾಸಕರು ಇದ್ದು, ಇವರನ್ನು ಹಣಿಯಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.  ರಾಜೀನಾಮೆ ಅಂಗೀಕಾರವಾದಲ್ಲಿ ಆ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆ ಮುಗಿಯುವವರೆಗೂ ಮೈತ್ರಿ ಮುಂದುವರಿಸಲು ನಿರ್ಧರಿಸಿದ್ದಾರೆ. 

ನಮ್ಮಲ್ಲಿಯೇ ಅಪಸ್ವರ ಎದುರಾದಲ್ಲಿ ರೆಬೆಲ್ ಆಗಿರುವವರನ್ನು ಕಟ್ಟಿ ಹಾಕುವುದು ಅಸಾಧ್ಯ. ಇದರಿಂದ ನಮ್ಮನ್ನು ಈ ಹಂತಕ್ಕೆ ತಂದವರಿಗೆ ಬುದ್ದಿ ಕಲಿಸಲು ಸೋಲಿನ ರುಚಿ ತೋರಿಸಬೇಕು. ಮೈತ್ರಿಯಲ್ಲೇ ಚುನಾವಣೆ ಎದುರಿಸಿ ಮುಗಿಸಬೇಕು.  ಪಕ್ಷಾಂತರ ಮಾಡುವವರಿಗೆ ಇದೊಂದು ಉದಾಹರಣೆಯಾಗಬೇಕು ಎಂದು ದೇವೇಗೌಡರು ಹೇಳಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರದಲ್ಲಿ ರೆಬೆಲ್ಸ್ ಎದುರಿಸಲು ಮೈತ್ರಿ ಅನಿವಾರ್ಯ.  ಉತ್ತರ ಕರ್ನಾಟಕದಲ್ಲಿ ಬೇಕಾದರೆ ಕಾಂಗ್ರೆಸಿನಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?
ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್‌ ಪಿಕ್ಸೆಲ್‌ ಫೋನ್‌, ಬೆಲೆ ಎಷ್ಟು ಕಡಿಮೆ ಗೊತ್ತಾ?