
ಬೆಂಗಳೂರು[ಜು.07]: ರಾಜ್ಯ ರಾಜಕರಣದಲ್ಲಿ ಶಾಸಕರ ಸಾಮೂಹಿಕ ರಾಜೀನಾಮೆ ದೋಸ್ತಿ ಸರ್ಕಾರಕ್ಕೆ ಬಹುದೊಡ್ಡ ಕಂಟಕವಾಗಿ ಮಾರ್ಪಾಡಾಗುತ್ತಿದೆ. ಸರ್ಕಾರ ಬೀಳುತ್ತಾ? ಉಳಿಯುತ್ತಾ? ಎಂಬ ಚರ್ಚೆಗಳ ನಡುವೆ, ರಾಜೀನಾಮೆ ನೀಡಿರುವ ಜೆಡಿಎಸ್ ಶಾಸಕರೊಬ್ಬರು ದೇವೇಗೌಡರ ಕುಟುಂಬದ ಹೆಣ್ಣುಮಕ್ಕಳ ವಿರುದ್ಧ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಹೌದು ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ನೀಡಿ ಮುಂಬೈಗೆ ತೆರಳಿರುವ ಕೆ. ಆರ್. ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ 'ದೇವೇಗೌಡರ ಇಡೀ ಕುಟುಂಬ ನನ್ನನ್ನು ಟಾರ್ಗೆಟ್ ಮಾಡಿತ್ತು. ದೇವೇಗೌಡರ ಮನೆ ಹೆಣ್ಮಕ್ಕಳೂ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದರು. ಬಿ ಫಾರಂ ಕೊಡುವುದರಿಂದ ಟಾರ್ಗೆಟ್ ಮಾಡುವುದನ್ನು ಆರಂಭಿಸಿದ ಅವರು ಬಳಿಕ, ಕೆ.ಆರ್. ಪೇಟೆ ಕ್ಷೇತ್ರಕ್ಕೆ ಬಂದೂ ನನ್ನನ್ನು ನಿರ್ಲಕ್ಷಿಸಿಸಲಾರಂಭಿಸಿದರು' ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಇದೇ ವಿಚಾರವಾಗಿ ಮತ್ತಷ್ಟು ಮಾತನಾಡಿರುವ ಶಾಸಕ ನಾರಾಯಣಗೌಡ 'ಚಿಕ್ಕ ಚಿಕ್ಕ ವಿಷಯಕ್ಕೂ ನನ್ನನ್ನು ಟಾರ್ಗೆಟ್ ಮಾಡಲಾಯ್ತು. ಕಾರ್ಪೋರೇಷನ್ ಎಲೆಕ್ಷನ್ನಲ್ಲೂ ಹಸ್ತಕ್ಷೇಪ ಮಾಡಿದ್ರು. ದೇವೇಗೌಡರು ಮುಖ ಕೊಟ್ಟು ನನ್ನೊಂದಿಗೆ ಮಾತನಾಡುತ್ತಿರಲಿಲ್ಲ. 10 ವೋಟ್ ತೆಗೆದುಕೊಳ್ಳದವರ ಮಾತು ಕೇಳಿ ನನ್ನನ್ನು ಟಾರ್ಗೆಟ್ ಮಾಡ್ತಿದ್ರು. ಕೆ.ಆರ್.ಪೇಟೆಯಲ್ಲಿ ಕಳ್ಳರು, ಕಿಡಿಗೇಡಿಗಳಲ್ಲಿದ್ದಾರೆ. ಅವರ ಮಾತು ಕೇಳಬೇಡಿ ಎಂದರೂ ನನ್ನ ಮಾತಿಗೆ ಬೆಲೆ ಕೊಡಲಿಲ್ಲ. ತಾಲೂಕು ಅಭಿವೃದ್ಧಿಪಡಿಸಲು ನನಗೆ ಯಾವುದೇ ನೆರವು ಕೊಡಲಿಲ್ಲ' ಎಂದು ದೇವೇಗೌಡರ ವಿರುದ್ಧ ಕಿಡಿಕಾರಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.