ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐಗೆ

By Web DeskFirst Published Aug 1, 2018, 9:35 AM IST
Highlights

ಅಜಿತಾಬ್ ನಾಪತ್ತೆ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸುವಂತೆ ಅವರ ತಂದೆ ಮನವಿ ಮಾಡಿದ್ದು, ಈ ಕುರಿತು ವಿಚಾರಣೆ ನಡೆಸಲು ಹೈಕೊರ್ಟ್ ತೀರ್ಮಾನ ಮಾಡಿದೆ. 

ಬೆಂಗಳೂರು: ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸುವಂತೆ ಆತನ ತಂದೆ ಮಾಡಿರುವ ಮನವಿ ಕುರಿತು ವಿಚಾರಣೆ ನಡೆಸಲು ಹೈಕೊರ್ಟ್ ತೀರ್ಮಾನಿಸಿದೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ್ದ ತಕರಾರು ಅರ್ಜಿಯು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠದಲ್ಲಿ ಮಂಗಳವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಸರ್ಕಾರಿ ವಕೀಲರು, ಪ್ರಕರಣ ಕುರಿತ ಸಿಐಡಿ ಪೊಲೀ ಸರ ತನಿಖಾ ವರದಿಯನ್ನು ಮುಚ್ಚಿದ ಲಕೋ ಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಈ ವರದಿ ಪರಿಶೀಲಿಸಿದ ನ್ಯಾಯಮೂರ್ತಿ ಗಳು, ತನಿಖಾ ಪ್ರಗತಿಯ ಬಗ್ಗೆ ಅತೃಪ್ತಿ ವ್ಯಕ್ತ ಪಡಿಸಿದರು. 

ಇದೇ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಅಜಿತಾಬ್ ನಾಪತ್ತೆಯಾಗಿ ಎಂಟು ತಿಂಗಳು ಕಳೆದಿವೆ. ಆದರೆ, ಪೊಲೀಸರ ತನಿಖೆ ಪ್ರಗತಿಯಾಗಿಲ್ಲ. ಹೀಗಾಗಿ, ಪ್ರಕ ರಣವನ್ನು ಸಿಬಿಐಗೆ ವಹಿಸುವಂತೆ ಕೋರಿದ ರು. ಇದನ್ನು ಪರಿಗಣಿಸಿದ ನ್ಯಾಯ ಮೂರ್ತಿ ಗಳು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸ ಬೇಕೆಂಬ ಅರ್ಜಿದಾರರ ಮನವಿಯ ಕುರಿತಾದ ಅಂಶಗಳ ಮೇಲೆ ವಿಚಾರಣೆ ನಡೆಸುವು ದಾಗಿ ತಿಳಿಸಿದರು. ಆ ಕುರಿತು ವಾದ ಮಂಡಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿದರು. ಅರ್ಜಿ ವಿಚಾರಣೆ ಆ. 2ಕ್ಕೆ ಮುಂದೂಡಿತು.

click me!