ಕುರ್ಚಿಯಲ್ಲಿ ಕೂತು ಅಧಿಕಾರ ನಡೆಸಲು ನಾನು ಹುಟ್ಟಿಲ್ಲ; ದೇಶಕ್ಕಾಗಿ ಮನೆ, ಮಠ ತ್ಯಾಗ ಮಾಡಿದ್ದೇನೆ: ಮೋದಿ

By Suvarna Web DeskFirst Published Nov 12, 2016, 10:37 AM IST
Highlights

ಇಂದು ಗೋವಾದಲ್ಲಿ ಮಾತನಾಡಿದ ಮೋದಿ ಕಪ್ಪು ಹಣದ ನಿರ್ಮೂಲನೆಗೆ ಪಣ ತೊಟ್ಟಿದ್ದೇನೆ, ಅದಕ್ಕಾಗಿ ಡಿಸೆಂಬರ್​​ 30ವರೆಗೂ ಸಹನೆಯಿಂದ ಕಾದು ನೋಡಿ. ಆ ಬಳಿಕ ನನ್ನ ನಿರ್ಧಾರ ತಪ್ಪು ಎನಿಸಿದರೆ ಯಾವುದೇ ಶಿಕ್ಷೆಗೆ ಬೇಕಾದರೂ ನಾನು ಸಿದ್ಧ ಎಂದಿದ್ದಾರೆ.

ಪಣಜಿ (ನ.13): ದೇಶಕ್ಕಾಗಿ ನನ್ನ ಮನೆ, ಮಠ ಬಿಟ್ಟು ಬಂದಿದ್ದೇನೆ, ಕುರ್ಚಿಯಲ್ಲಿ ಕೂತು ಅಧಿಕಾರ ನಡೆಸಲು ನಾನು ಹುಟ್ಟಿಲ್ಲ, ಡಿಸೆಂಬರ್​​ 30ವರೆಗೂ ಸಹನೆಯಿಂದ ಕಾದು ನೋಡಿ, ಆ ಬಳಿಕ ನನ್ನ ನಿರ್ಧಾರ ತಪ್ಪು ಅನಿಸಿದರೆ ಯಾವುದೇ ಶಿಕ್ಷೆಗೆ ಸಿದ್ಧ ಎಂದು ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ.

ಇಂದು ಗೋವಾದಲ್ಲಿ ಮಾತನಾಡಿದ ಮೋದಿ ಕಪ್ಪು ಹಣದ ನಿರ್ಮೂಲನೆಗೆ ಪಣ ತೊಟ್ಟಿದ್ದೇನೆ, ಅದಕ್ಕಾಗಿ ಡಿಸೆಂಬರ್​​ 30ವರೆಗೂ ಸಹನೆಯಿಂದ ಕಾದು ನೋಡಿ. ಆ ಬಳಿಕ ನನ್ನ ನಿರ್ಧಾರ ತಪ್ಪು ಅನಿಸಿದರೆ ಯಾವುದೇ ಶಿಕ್ಷೆಗೆ ಬೇಕಾದರೂ ನಾನು ಸಿದ್ಧ ಎಂದಿದ್ದಾರೆ.

ಈಗಾಗಲೇ 2ಜಿ ಸ್ಪೆಕ್ಟ್ರಮ್ ಮತ್ತು ಕೋಲ್​ಗೇಟ್​ ಹಗರಣಗಳಲ್ಲಿ ಕೋಟಿ ಕೋಟಿ ಲೂಟಿ ಮಾಡಿದವರೆಲ್ಲಾ ಈಗ ಕೇವಲ 4 ಸಾವಿರಕ್ಕೆ ಬ್ಯಾಂಕ್​ನಲ್ಲಿ ಕ್ಯೂ ನಿಲ್ಲುವಂತಾಗಿದೆ. ಕಪ್ಪು ಹಣ್ಣದ ವಿರುದ್ದ ಹೋರಾಡುವುದು ನನ್ನ ಕರ್ತವ್ಯ. ಆದ್ದರಿಂದ ನನ್ನ ಮುಂದಿನ ಟಾರ್ಗೆಟ್​​ ಬೇನಾಮಿ ಹೆಸರಿನಲ್ಲಿ ಆಸ್ತಿ ಹೊಂದಿರುವವರು. ನಾನು ‘ಭ್ರಷ್ಟಾಚಾರ ನಿರ್ಮೂಲನೆ ಮಾಡಿಯೇ ತೀರುವೆ’. ತಿಜೋರಿಯಲ್ಲಿಟ್ಟ ಕೋಟಿ, ಕೋಟಿ ಹಣವನ್ನು ಈಗ ಭಿಕ್ಷುಕನೂ ಮುಟ್ಟುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ.

ನಾನು ಕಷ್ಟಗಳನ್ನು ಹತ್ತಿರದಿಂದ ನೋಡಿದ್ದೇನೆ, ಜನರ ಕಷ್ಟ ನನಗೆ ಅರ್ಥವಾಗುತ್ತದೆ, ಇದು ಕೇವಲ 50 ದಿನಗಳ ಕಷ್ಟ ಅಷ್ಟೇ. ಒಮ್ಮೆ ಸ್ವಚ್ಚತಾ ಕಾರ್ಯ ಪೂರ್ಣವಾದರೆ ಸೊಳ್ಳೆಗಳೂ ಹತ್ತಿರ ಸುಳಿಯುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ಇನ್ನೂ ಯಾರಾದರೂ ಕಪ್ಪು ಹಣ ಇಟ್ಕೊಂಡಿದ್ರೆ ಒಂದು ವಿಷಯ ಅರ್ಥ ಮಾಡ್ಕೊಳಿ, ಸ್ಯಾತಂತ್ರ್ಯದ ನಂತರದ ಎಲ್ಲಾ ಕಳ್ಳ ಹಣಗಳ ಲೆಕ್ಕವನ್ನು ಹೊರಗೆಳೆಯುತ್ತೇನೆ. ಈ ಕಾರ್ಯಕ್ಕಾಗಿ 1 ಲಕ್ಷ ಜನರನ್ನೂ ಹೊಸದಾಗಿ ನೇಮಿಸಿಕೊಳ್ಳಲು ನಾನು ಸಿದ್ಧ. ಎಂತಹ ಜನರನ್ನು ನಾನು ಎದುರು ಹಾಕಿಕೊಂಡಿದ್ದೇನೆ ಎಂಬುದು ನನಗೆ ಗೊತ್ತು. ಇದು ಎಂಥಾ ಅಪಾಯಕಾರಿ ಕೆಲಸ ಎಂಬುದು ಕೂಡ ನನಗೆ ಗೊತ್ತಿದೆ. ದೇಶದ ಹಿತಕ್ಕಾಗಿ ನನ್ನ ಮನೆ, ಮಠ ಬಿಟ್ಟುಬಂದಿದ್ದೇನೆ. ಕುರ್ಚಿಯಲ್ಲಿ ಕೂತು ಅಧಿಕಾರ ನಡೆಸಲು ನಾನು ಹುಟ್ಟಿಲ್ಲ ಎಂದು ಭಾಷಣದ ವೇಳೆ ಪ್ರಧಾನಿ ಮೋದಿ ಭಾವುಕರಾದರು.

click me!