
ಹಾಸನ (ಜೂ. 18): ಜಿಲ್ಲಾಧಿಕಾರಿ ರೋಹಿಣಿ ವರ್ಗಾವಣೆ ಪ್ರಕರಣದ ಮಹತ್ವದ ವಿಚಾರಣೆ ಇಂದು ಹೈಕೋರ್ಟ್’ನಲ್ಲಿ ನಡೆಯಲಿದೆ.
ಅವಧಿಗೆ ಮುನ್ನ ಸಕಾರಣವಿಲ್ಲದೆ ಹಿಂದಿನ ಸರ್ಕಾರ ಮಾಡಿದ್ದ ವರ್ಗಾವಣೆಯನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮರಳುವ ಸಾದ್ಯತೆಯಿದೆ.
ಸಂಘರ್ಷಕ್ಕೆ ವಿರಾಮ ಹಾಕಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮತ್ತೆ ಹಾಸನಕ್ಕೆ ಸಿಂಧೂರಿಯವರನ್ನು ವರ್ಗಾಯಿಸುವ ಮೂಲಕ ಸಂಘರ್ಷಕ್ಕೆ ಅಂತ್ಯಹಾಡಲು ಸರ್ಕಾರ ಸಿದ್ಧತೆ ನಡೆಸಿದೆ.
ಈ ಹಿಂದೆ ಸಿಂಧೂರಿ ವರ್ಗಾವಣೆಯಾದಾಗ ಸಿಂಧೂರಿ ಪರ ಜೆಡಿಎಸ್ ಹೋರಾಟ ಮಾಡಿತ್ತು. ಇದೀಗ ಜೆಡಿಎಸ್ ಸರ್ಕಾರವೇ ಇದ್ದರೂ ಪ್ರಾಮಾಣಿಕ ಅಧಿಕಾರಿಗೆ ಬೆಂಬಲ ನೀಡದ ಅಪವಾದದಿಂದ ದೂರಾಗಲು ರೋಹಿಣಿಯವರನ್ನು ಮತ್ತೆ ಹಾಸನಕ್ಕೆ ವರ್ಗಾವಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.