
ಹಾಸನ, [ಅ.31]: ದೇಶದೆಲ್ಲೆಡೆ ಭಾರಿ ಸಂಚಲನ ಉಂಟು ಮಾಡಿರುವ ಮೀಟೂ ಅಭಿಯಾನ ಸಾಕಷ್ಟು ವಿವಾದ ಸೃಷ್ಟಿಸಿದರೂ ಕೂಡ ಅನೇಕರಿಗೆ ತಮ್ಮ ಕರಾಳ ಅನುಭವ ಬಿಚ್ಚಿಡಲು ವೇದಿಕೆಯಾಗಿದೆ.
ಇದೇ ಅಭಿಯಾನದಲ್ಲಿ ಹಾಸನದ ಯುವತಿಯೊಬ್ಬಳು ತನಗಾದ ನೋವನ್ನು ತೋಡಿಕೊಂಡಿದ್ದಾಳೆ. ಹೆಸರೇಳಲು ಇಚ್ಛಿಸದ ಯುವತಿ ಸಾಮಾಜಿಕ ಜಾಲತಾಣಗಳ ಮೂಲಕ ನೋವು ಹೊರ ಹಾಕಿದ್ದಾಳೆ.
ನಿವೃತ್ತಿ ಅಂಚಿನಲ್ಲಿರುವ ಹಾಸನದ ಸರ್ಕಾರಿ ನೌಕರ ಕೃಷ್ಣೇಗೌಡ ಎಂಬುವರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾಳೆ. ಕೆಲಸ ಕೊಡಿಸುವ ಹೆಸರಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ.
ಮೊಬೈಲ್ ನಂಬರ್ ಪಡೆದು ಮುತ್ತು ನೀಡುವಂತೆ ಹಾಗೂ ಎಲ್ಲಾ ರೀತಿಯಲ್ಲು ಸಹಕರಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಈ ಪ್ರಕರಣದಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ. ನನ್ನಂತ ಅಮಾಯಕ ಹೆಣ್ಣುಮಕ್ಕಳಿಗೆ ನ್ಯಾಯ ಬೇಕು. ಹಾಸನದ ಎಸ್ಪಿ ಪ್ರಕಾಶ್ ಗೌಡರಿಗೆ ತಲುಪವವರೆಗೂ ಈ ವಿಡಿಯೋ ಶೇರ್ ಮಾಡಿ ಎಂದು ಯುವತಿ ಮನವಿ ಮಾಡಿಕೊಂಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.