ಆ್ಯಪ್ ನಲ್ಲಿ ಸಿಗಲಿವೆ ಪಟಾಕಿ?

By Web DeskFirst Published Oct 31, 2018, 4:07 PM IST
Highlights

ದೀಪಾವಳಿಯಲ್ಲಿ ಪಟಾಕಿಯಿಂದ ಆಗುವ ಮಾಲಿನ್ಯ ತಡೆಯಲು ಸುಪ್ರೀಂಕೋರ್ಟ್ ಹಲವಾರು ನಿರ್ಬಂಧ ಹೇರಿದೆ. ಹೀಗಾಗಿ ಈ ಬಾರಿ ಶಿವಕಾಶಿಯಲ್ಲಿ ಮಾಲಿನ್ಯ ಕಾರಕ ಪಟಾಕಿಗಳ ತಯಾರಿಕೆ ಸ್ಥಗಿತಗೊಳಿಸಲಾಗಿದೆ. ಅದರ ಬದಲು ಬೆಂಕಿ ಹಚ್ಚದೇ ಹೊಡೆಯಬಹುದಾದ ಡಿಜಿಟಲ್ ಪಟಾಕಿಗಳನ್ನು ಸಿದ್ಧಪಡಿಸಲಾಗಿದೆ. 

ನವದೆಹಲಿ : ದೀಪಾವಳಿಯಲ್ಲಿ ಪಟಾಕಿಯಿಂದ ಆಗುವ ಮಾಲಿನ್ಯ ತಡೆಯಲು ಸುಪ್ರೀಂಕೋರ್ಟ್ ಹಲವಾರು ನಿರ್ಬಂಧ ಹೇರಿದೆ. ಹೀಗಾಗಿ ಈ ಬಾರಿ ಶಿವಕಾಶಿಯಲ್ಲಿ ಮಾಲಿನ್ಯ ಕಾರಕ ಪಟಾಕಿಗಳ ತಯಾರಿಕೆ ಸ್ಥಗಿತಗೊಳಿಸಲಾಗಿದೆ. ಅದರ ಬದಲು ಬೆಂಕಿ ಹಚ್ಚದೇ ಹೊಡೆಯಬಹುದಾದ ಡಿಜಿಟಲ್ ಪಟಾಕಿಗಳನ್ನು ಸಿದ್ಧಪಡಿಸಲಾಗಿದೆ. 

ಈ ಪಟಾಕಿಯನ್ನು ಖರೀದಿಸಲು ಶಿವಕಾಶಿ ಪಟಾಕಿ ಮೊಬೈಲ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ವಿವಿಧ ರೀತಿ ಪಟಾಕಿಗಳಿದ್ದು, ಅವುಗಳ ಮೇಲೆ ಕ್ಲಿಕ್ ಮಾಡಿದರೆ, ಪಟಾಕಿ ಸಿಡಿಯಲಿದೆ. 

ಜೋರಾಗಿ ಶಬ್ದ ಕೇಳಬೇಕಾದರೆ ಕಿವಿಗೆ ಇಯರ್ ಫೋನ್ ಹಾಕಿಕೊಳ್ಳಬೇಕು ಎಂಬ ಸಲಹೆ ನೀಡಲಾಗಿದೆ. ಇದರಿಂದ ಹೊಗೆ ಹಾಗೂ ಶಬ್ದ ಮಾಲಿನ್ಯ ಎರಡೂ ಇರುವುದಿಲ್ಲ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.

click me!