
ನವದೆಹಲಿ (ಜ.14): ಖಾದಿ ಕ್ಯಾಲೆಂಡರ್ ನಲ್ಲಿ ಮೋದಿ ಫೋಟೋ ಕಾಣಿಸಿಕೊಂಡಿರುವುದನ್ನು ಸಮರ್ಥಿಸಿಕೊಳ್ಳುತ್ತಾ ಹರ್ಯಾಣ ಸಚಿವರೊಬ್ಬರು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. ಮಹಾತ್ಮ ಗಾಂಧೀಜಿಗಿಂತ ಪ್ರಧಾನಿ ನರೇಂದ್ರ ಮೋದಿ ಹೆಸರು ಉತ್ತಮ ಬ್ರಾಂಡ್ ಎಂದು ಬಾಂಬ್ ಸಿಡಿಸಿದ್ದಾರೆ.
ಕ್ಯಾಲೆಂಡರ್ ನಲ್ಲಿ ಗಾಂಧೀಜಿ ಫೋಟೋ ಇರುವ ಜಾಗದಲ್ಲಿ ಮೋದಿ ಪೋಟೋ ಹಾಕಿರುವುದು ಸಮಂಜಸ. ಗಾಂಧೀಜಿ ಹೆಸರಿಗಿಂತ ಮೋದಿ ಹೆಸರು ಹೆಚ್ಚು ಬ್ರಾಂಡ್ ಆಗಿದೆ. ಖಾದಿಯಲ್ಲಿ ಗಾಂಧೀಜಿ ಹೆಸರನ್ನು ಸೇರಿಸಿದಾಗಿನಿಂದಲೂ ಖಾದಿ ಗ್ರಾಮೋದ್ಯಮ ಅಭಿವೃದ್ಧಿಯಾಗಿಲ್ಲ ಎಂದು ಹರ್ಯಾಣದ ಆರೋಗ್ಯ ಉಸ್ತುವಾರಿ, ಕ್ರೀಡಾ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೇ ಮುಂದುವರೆದು ಗಾಂಧೀಜಿ ಫೋಟೋ ನೋಟಿನಲ್ಲಿ ಕಾಣಿಸಿಕೊಂಡಾಗಿನಿಂದ ನೋಟಿನ ಮೌಲ್ಯ ಕುಂಠಿತವಾಗಿದೆ ಎಂದು ಹೇಳಿದ್ದಾರೆ.
ಅನಿಲ್ ವಿಜ್ ವಿವಾದಾತ್ಮಕ ಹೇಳಿಕೆಯಿಂದ ಇರುಸುಮುರುಸಾಗಿರುವ ಬಿಜೆಪಿ ಇದರಿಂದ ಅಂತರ ಕಾಯ್ದುಕೊಂಡಿದೆ. ಇದು ಅನಿಲ್ ಅವರ ವೈಯಕ್ತಿಕ ಅಭಿಪ್ರಾಯ. ಇದು ಪಕ್ಷದ ಅಭಿಪ್ರಾಯವಲ್ಲ ಎಂದು ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಸ್ಪಷ್ಟನೆ ನೀಡಿದ್ದಾರೆ.
ಮಹಾತ್ಮ ಗಾಂಧಿಯವರ ಬಗ್ಗೆ ಮಾಡಿರುವ ಟೀಕೆ ನನ್ನ ವೈಯಕ್ತಿಕ ಅಭಿಪ್ರಾಯ. ಯಾರೊಬ್ಬರ ಭಾವನೆಗಳಿಗೂ ಧಕ್ಕೆ ತರಲು ಇಚ್ಚಿಸದೇ ನನ್ನ ಮಾತನ್ನು ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ಅನಿಲ್ ವಿಜ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.