ಹನುಮಂತ ಜೈನ ಧರ್ಮೀಯ: ವಿವಾದಕ್ಕೀಡಾಯ್ತು ಜೈನ ಆಚಾರ್ಯರ ಹೇಳಿಕೆ

Published : Dec 03, 2018, 04:25 PM IST
ಹನುಮಂತ ಜೈನ ಧರ್ಮೀಯ: ವಿವಾದಕ್ಕೀಡಾಯ್ತು ಜೈನ ಆಚಾರ್ಯರ ಹೇಳಿಕೆ

ಸಾರಾಂಶ

ರಾಜಸ್ತಾನ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹನುಮಂತನ ಜಾತಿ ವಿಚಾರವೂ ಸದ್ದು ಮಾಡುತ್ತಿದೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಜೈನ ಗುರು ಆಚಾರ್ಯ ನಿರ್ಭಯ ಸಾಗರ್ ಅವರು ವಿಭಿನ್ನ ಹೇಳಿಕೆ ನೀಡಿದ್ದಾರೆ. 

ಭೋಪಾಲ್[ಡಿ.03]: ರಾಜಸ್ಥಾನ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಪಕ್ಷಗಳು ಪರಸ್ಪರ ರಾಜಕೀಯ ಕೆಸರೆರಚಾಟ ಮುಂದುವರೆಸಿದ್ದಾರೆ. ಇವೆಲ್ಲದರ ನಡುವೆ ಹನುಮಂತನ ಜಾತಿ ವಿಚಾರವೂ ತಳುಕು ಹಾಕಿತ್ತು. ಸದ್ಯ ಇದಕ್ಕೆ ಸಂಬಂಧಿಸಿದಂತೆ ಜೈನ ಗುರು ಆಚಾರ್ಯ ನಿರ್ಭಯ ಸಾಗರ್ ಅವರು ವಿಭಿನ್ನ ಹೇಳಿಕೆ ನೀಡಿದ್ದಾರೆ. ಭೋಪಾಲ್ ನಿಂದ 25 ಕಿ. ಮೀಟರ್ ದೂರದಲ್ಲಿರುವ ಸಮಸ್‌ಗಢ್ ನಲ್ಲಿರುವ ಪಂಚಬಾಲಯತಿ ಜೈನ ಬಸದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹನುಮಂತ ಜೈನ ಧರ್ಮ ಪಾಲಿಸುತ್ತಿದ್ದರು ಎಂದಿದ್ದಾರೆ. ಸದ್ಯ ಇವರ ಹೇಳಿಕೆ ಭಾರೀ ಚರ್ಚೆ ಸೃಷ್ಟಿಸಿದೆ.

ಈ ಕುರಿತಾಗಿ ಮಾತನಾಡಿದ ಆಚಾರ್ಯ ನಿರ್ಭಯ ಸಾಗರ್ ಜೈನ ಧರ್ಮದಲ್ಲಿ ಹನುಮಂತ ಜೈನ ಧರ್ಮ ಪಾಲಿಸುತ್ತಿದ್ದರು ಎಂದು ಬರೆದಿರುವ ಹಲವಾರು ಗ್ರಂಥಗಳಿವೆ. ಜೈನ ಧರ್ಮದಲ್ಲಿ 24 ಕಾಮದೇವರಿದ್ದಾರೆ ಇವರಲ್ಲಿ ಹನುಮಂತ ಕೂಡಾ ಒಬ್ಬರು ಎಂದಿದ್ದಾರೆ.

'ಜೈನ ದರ್ಶನದ ಅನ್ವಯ ಚಕ್ರವರ್ತಿ, ನಾರಾಯಣ, ಪ್ರತಿ ನಾರಾಯಣ, ಬಲದೇವ, ವಾಸುದೇವ, ಕಾಮದೇವ ಹಾಗೂ ತೀರ್ಥಂಕರರ ತಂದೆ ತಾಯಿ ಇವರೆಲ್ಲರೂ ಕ್ಷತ್ರಿಯರಾಗಿದ್ದರು. ಹೀಗೆ ಒಟ್ಟು 169 ಮಹಾಪುರುಷರಿದ್ದರು, ಇವರಲ್ಲಿ ಹನುಮಂತನ ಹೆಸರೂ ಇದೆ. ಇವರೊಬ್ಬ ಕಾಮದೇವ ಆಗಿದ್ದರಿಂದ ಕ್ಷತ್ರಿಯರಾಗಿದ್ದರು. ಆರಂಭದಲ್ಲಿ ಕ್ಷತ್ರಿಯರಾಗಿದ್ದ ಹನುಮಂತ ವೈರಾಗ್ಯ ತಾಳಿ ಕಾಡಿಗೆ ಹೋಗಿ, ಇದಾದ ಬಳಿಕ ದೀಕ್ಷೆ ಸ್ವೀಕರಿಸಿದರು' ಎಂದಿದ್ದಾರೆ ಜೈನ ಗುರುಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು