'ಹನುಮಂತ ವಿಶ್ವದ ಮೊದಲ ಆದಿವಾಸಿ': ಬಿಜೆಪಿ ಸಂಸದ..!

Published : May 27, 2018, 01:34 PM IST
'ಹನುಮಂತ ವಿಶ್ವದ ಮೊದಲ ಆದಿವಾಸಿ': ಬಿಜೆಪಿ ಸಂಸದ..!

ಸಾರಾಂಶ

ಹನುಮಂತ ಜಗತ್ತಿನ ಮೊದಲ ಆದಿವಾಸಿ ಎಂದು ಹೇಳುವ ಮೂಲಕ ರಾಜಸ್ತಾನ ಅಲ್ವಾರ್ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ವಿವಾದ ಸೃಷ್ಟಿಸಿದ್ದಾರೆ.  ಆದಿವಾಸಿಗಳನ್ನು ಒಳಗೊಂಡ ಸೈನ್ಯವನ್ನು ಹನುಮಂತ ಕಟ್ಟಿದ್ದು ಅದಕ್ಕೆ ಭಗವಂತ ಶ್ರೀರಾಮ ತರಬೇತಿ ನೀಡಿದ ನಂತರ ದೇಶದ ಬುಡಕಟ್ಟು ಜನರು ಹನುಮಂತನನ್ನು ಆರಾಧ್ಯ ದೈವವಾಗಿ ಪೂಜಿಸಲು ಆರಂಭಿಸಿದರು ಎಂದು ಅಹುಜಾ ಹೇಳಿದ್ದಾರೆ.

ಜೈಪುರ್ (ಮೇ.27): ಹನುಮಂತ ಜಗತ್ತಿನ ಮೊದಲ ಆದಿವಾಸಿ ಎಂದು ಹೇಳುವ ಮೂಲಕ ರಾಜಸ್ತಾನ ಅಲ್ವಾರ್ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ವಿವಾದ ಸೃಷ್ಟಿಸಿದ್ದಾರೆ.  ಆದಿವಾಸಿಗಳನ್ನು ಒಳಗೊಂಡ ಸೈನ್ಯವನ್ನು ಹನುಮಂತ ಕಟ್ಟಿದ್ದು ಅದಕ್ಕೆ ಭಗವಂತ ಶ್ರೀರಾಮ ತರಬೇತಿ ನೀಡಿದ ನಂತರ ದೇಶದ ಬುಡಕಟ್ಟು ಜನರು ಹನುಮಂತನನ್ನು ಆರಾಧ್ಯ ದೈವವಾಗಿ ಪೂಜಿಸಲು ಆರಂಭಿಸಿದರು ಎಂದು ಅಹುಜಾ ಹೇಳಿದ್ದಾರೆ.


ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಬುಡಕಟ್ಟು ಜನಾಂಗದ ವ್ಯಕ್ತಿಯಾಗಿ, ಹನುಮಂತನ ವಿರುದ್ಧ ಅಗೌರವ ತೋರಿದ್ದಾರೆ. ಹೀಗಾಗಿ, ತಾನು ಅವರ ಜತೆ ಮಾತನಾಡಿದ್ದಾಗಿ ಎಂದು ಪಕ್ಷದ ಕಚೇರಿಯಲ್ಲಿ ಮಾಧ್ಯಮಕ್ಕೆ ಅಹುಜಾ ಹೇಳಿದ್ದಾರೆ. ಬುಡಕಟ್ಟು ಜನಾಂಗದ ಮೊದಲ ದೇವರು ಹಾಗೂ ಹಿಂದೂವಿನ ದೇವರು ಹನುಮಾನ್ ಜೀ. ಆದರೂ ಬಿಜೆಪಿ ಸಂಸದ ಯಾಕೆ ಅಗೌರವ ತೋರಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇದು ದುರದೃಷ್ಟಕರ ಎಂದು ಅಹುಜಾ ಹೇಳಿದ್ದಾರೆ.

ಈ ಹಿಂದೆ ಅಹುಜಾ, ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಪ್ರತಿನಿತ್ಯ 5 ಸಾವಿರ ಎಲುಬಿನ ತುಂಡುಗಳು, ಬಳಸಿದ 3 ಸಾವಿರ ಕಾಂಡೋಮ್ ಗಳು, ಗರ್ಭಪಾತ ಮಾಡಲು ಬಳಸಿದ 500 ಚುಚ್ಚುಮದ್ದುಗಳು, 10 ಸಾವಿರ ಸಿಗರೆಟ್ ಗಳು ಕಾಣಸಿಗುತ್ತವೆ ಎಂದು ಹೇಳಿಕೆ ನೀಡಿದ್ದು ಇದು ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhabana Menon: 'ಮಲಯಾಳಂ ಚಿತ್ರರಂಗದ ಹೆಮ್ಮೆ' ಎಂದ ಸಚಿವರು; ನಟಿ ಭಾವನಾಗೆ ಪ್ರಶಂಸೆ ಸುರಿಮಳೆ!'
ಆದಾಯ ಕಡಿಮೆ ಆಗಿದ್ದೋ, ಖರ್ಚು ಜಾಸ್ತಿಯಾಗಿದ್ದೋ! ಯೋಚಿಸಬೇಕಾದ ಕೆಲವು ಆರ್ಥಿಕ ಸಂಗತಿಗಳು