
ವಾಷಿಂಗ್ಟನ್ [ಮೇ.27]: ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ನೆಲದಲ್ಲಿ ಕಾಲಿಟ್ಟ ನಾಲ್ಕನೇ ಮನುಷ್ಯ ಎಂಬ ಖ್ಯಾತಿಯ ಆ್ಯಲನ್ ಬೀನ್ ನಿಧನ ಹೊಂದಿದ್ದಾರೆ. 86 ವಯಸ್ಸಿನ ಬೀನ್ ಹೋಸ್ಟನ್ ನ ಮೆತೊಡಿಸ್ಟ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
1969 ರ ಅಪೊಲೋ-12 ಮಿಷನ್ ಸಂದರ್ಭದಲ್ಲಿ ಫ್ಲೈಟ್ ಪೈಲೆಟ್ ಆಗಿ ಆ್ಯಲನ್ ಬೀನ್ ಕಾರ್ಯ ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಬೀನ್ ಅವರನ್ನು ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ಮನುಷ್ಯ ಎಂದು ಪರಿಗಣಿಸಲಾಗಿದೆ. ತಮ್ಮ ಜೀವಿತಾವಧಿಯಲ್ಲಿ ಒಟ್ಟು ಎರಡು ಬಾರಿ ಬಾಹ್ಯಾಕಾಶ ಯಾತ್ರೆ ಕೈಗೊಂಡಿದ್ದಾರೆ.
1975 ರಲ್ಲಿ ನಿವೃತ್ತಿ ಹೊಂದಿದ ಬೀನ್, ನಾಸಾದ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬೀನ್ ಅವರ ನಿಧನಕ್ಕೆ ನಾಸಾ ತೀವ್ರ ಸಂತಾಪ ಸೂಚಿಸಿದ್ದು, ಬ್ರಹ್ಮಾಂಡದ ಕೌತುಕಗಳನ್ನು ಬಿಚ್ಚಿಡುವ ಆ್ಯಲನ್ ಬೀನ್ ಕನಸನ್ನು ನನಸು ಮಾಡಲು ನಾಸಾ ಸದಾ ಪ್ರಯತ್ನಿಸುತ್ತದೆ ಎಂದು ತನ್ನ ಸಂತಾಪ ಸೂಚನೆಯಲ್ಲಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.