ಕೇಂದ್ರದ ರಾಮಾಯಣ ಸರ್ಕ್ಯೂಟ್ ಯೋಜನೆಯಲ್ಲಿ ಕರ್ನಾಟಕದ ಹಂಪಿಗೆ ಸ್ಥಾನ

Published : Jul 24, 2017, 06:58 PM ISTUpdated : Apr 11, 2018, 12:58 PM IST
ಕೇಂದ್ರದ ರಾಮಾಯಣ ಸರ್ಕ್ಯೂಟ್ ಯೋಜನೆಯಲ್ಲಿ ಕರ್ನಾಟಕದ ಹಂಪಿಗೆ ಸ್ಥಾನ

ಸಾರಾಂಶ

ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಆರಂಭಿಸಿರುವ ‘ಸ್ವದೇಶ ದರ್ಶನ ಯೋಜನೆ’ಯಲ್ಲಿ ಕರ್ನಾಟಕದ ಹಂಪಿಯು ಸೇರಿದೆ. ‘ಸ್ವದೇಶ ದರ್ಶನ ಯೋಜನೆ’ಯು ವಿಷಯಾಧಾರಿತ ಯೋಜನೆಯಾಗಿದ್ದು, ಅದರಡಿಯಲ್ಲಿ 2 ಸರ್ಕ್ಯೂಟ್’ಗಳನ್ನು ರೂಪಿಸಲಾಗಿದ್ದು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ರಾಮಾಯಣ ಸ್ರಕ್ಯೂಟ್’ನಲ್ಲಿ ದೇಶದ 15 ಸ್ಥಳಗಳನ್ನು ಗುರುತಿಸಲಾಗಿದ್ದರೆ, ಕೃಷ್ಣ ಸರ್ಕ್ಯೂಟ್’ನಲ್ಲಿ 12 ಸ್ಥಳಗಳನ್ನು ಗುರುತಿಸಲಾಗಿದೆ.

ನವದೆಹಲಿ: ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಆರಂಭಿಸಿರುವ ‘ಸ್ವದೇಶ ದರ್ಶನ ಯೋಜನೆ’ಯಲ್ಲಿ ಕರ್ನಾಟಕದ ಹಂಪಿಯು ಸೇರಿದೆ.

‘ಸ್ವದೇಶ ದರ್ಶನ ಯೋಜನೆ’ಯು ವಿಷಯಾಧಾರಿತ ಯೋಜನೆಯಾಗಿದ್ದು, ಅದರಡಿಯಲ್ಲಿ 2 ಸರ್ಕ್ಯೂಟ್’ಗಳನ್ನು ರೂಪಿಸಲಾಗಿದ್ದು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ರಾಮಾಯಣ ಸ್ರಕ್ಯೂಟ್’ನಲ್ಲಿ ದೇಶದ 15 ಸ್ಥಳಗಳನ್ನು ಗುರುತಿಸಲಾಗಿದ್ದರೆ, ಕೃಷ್ಣ ಸರ್ಕ್ಯೂಟ್’ನಲ್ಲಿ 12 ಸ್ಥಳಗಳನ್ನು ಗುರುತಿಸಲಾಗಿದೆ.

ಕರ್ನಾಟಕದ ಹಂಪಿಯು ರಾಮಾಯಣ ಸರ್ಕ್ಯೂಟ್’ನಲ್ಲಿ ಸ್ಥಾನಗಿಟ್ಟಿಸಿದೆ.

ಉತ್ತರ ಪ್ರದೇಶದ ಅಯೋಧ್ಯೆ, ನಂದಿಗ್ರಾಮ್, ಶೃಂಗವೇರ್ ಪುರ ಮತ್ತು ಚಿತ್ರಕೂಟ,  ಬಿಹಾರದ ಸೀತಾಮಡಿ, ಬಕ್ಸರ್, ಮತ್ತು ದರ್ಭಂಗಾ, ಮಧ್ಯ ಪ್ರದೇಶದ ಚಿತ್ರಕೂಟ,  ಒಡಿಶಾದ ಮಹೇಂದ್ರಗಿರಿ, ಛತ್ತೀಸ್’ಗಢದ ಜಗದಾಲ್’ಪುರ,  ಮಹಾರಾಷ್ಟ್ರದ ನಾಶಿಕ್ ಮತ್ತು ನಾಗಪುರ, ತೆಲಾಂಗಣದ ಭದ್ರಾಚಲಮ್,  ಹಾಗೂ ತಮಿಳುನಾಡಿನ ರಾಮೇಶ್ವರಂ, ರಾಮಾಯಣ ಸರ್ಕ್ಯೂಟ್’ನಲ್ಲಿವೆ.

ಇದೇ ರೀತಿ ಕೃಷ್ಣಾ ಸರ್ಕ್ಯೂಟ್’ನಲ್ಲಿ 12 ಸ್ಥಳಗಳನ್ನು ಅಭಿವೃದ್ಧಿಪಡಿಸಲು ಗುರುತಿಸಲಾಗಿದ್ದು, ದ್ವಾರಕ (ಗುಜರಾತ್),  ನಾಥ್’ದ್ವಾರ, ಜೈಪುರ ಮತ್ತು ಸಿಕಾರ್ (ರಾಜಸ್ಥಾನ), ಕುರುಕ್ಷೇತ್ರ ( ಹರ್ಯಾಣ), ಮಥುರಾ, ಬೃಂದಾವನ, ಗೋಕುಲ ಹಾಗೂ ಬರ್ಸಾನಾ, ನಂದಗಾಂವ್ ಮತ್ತು ಗೋವರ್ಧನ್ (ಉತ್ತರ ಪ್ರದೇಶ) ಹಾಗೂ ಪುರಿ (ಒಡಿಶಾ)ಗಳು ಈ ಪಟ್ಟಿಯಲ್ಲಿವೆ.

18-36 ತಿಂಗಳ ಅವಧಿಯಲ್ಲಿ ಈ ಸ್ಥಳಗಳಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದೆಂದು, ಡಾ. ಮಹೇಶ್ ಶರ್ಮಾ ಲೋಕಸಭೆಗೆ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ