ನಿತಾರಿ ಕೊಲೆ ಆರೋಪಿಗಳಿಗೆ ಮರಣದಂಡನೆ

By Suvarna Web DeskFirst Published Jul 24, 2017, 6:48 PM IST
Highlights

ಡಿಸೆಂಬರ್ 29,2006 ರಂದು ಉದ್ಯಮಿ ಮೋನಿಂದರ್ ಸಿಂಗ್ ಪಾಂಧೇರ್ ಮನೆಯಲ್ಲಿ 19 ಅಸ್ಥಿಪಂಜರಗಳನ್ನು ಪತ್ತೆಹಚ್ಚಿ ಪಾಂಧೇರ್ ಹಾಗೂ ಕೋಲಿ ವಿರುದ್ಧ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಆರೋಪದ ಮೇಲೆ ದೂರು ದಾಖಲಿಸಿದ್ದರು.

ನವದೆಹಲಿ(ಜು.24): ದೇಶದ್ಯಾಂತ ಬೆಚ್ಚಿ ಬೀಳಿಸಿದ್ದ ನಿತಾರಿ ಕೊಲೆ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಮೋನಿಂದರ್ ಸಿಂಗ್ ಪಾಂಧೇರ್ ಹಾಗೂ ಆತನ ಮನೆ ಸಹಾಯಕ ಸುರಿಂದರ್ ಕೋಲಿಗೆ ಸಿಬಿಐ ವಿಶೇಷ ಕೋರ್ಟ್ ಮರಣ ದಂಡನೆ ವಿಧಿಸಿದೆ.

ಡಿಸೆಂಬರ್ 29,2006 ರಂದು ಉದ್ಯಮಿ ಮೋನಿಂದರ್ ಸಿಂಗ್ ಪಾಂಧೇರ್ ಮನೆಯಲ್ಲಿ 19 ಅಸ್ಥಿಪಂಜರಗಳನ್ನು ಪತ್ತೆಹಚ್ಚಿ ಪಾಂಧೇರ್ ಹಾಗೂ ಕೋಲಿ ವಿರುದ್ಧ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಆರೋಪದ ಮೇಲೆ ದೂರು ದಾಖಲಿಸಿದ್ದರು.

ಇಬ್ಬರ ವಿರುದ್ಧ 19 ಪ್ರಕರಣಗಳಲ್ಲಿ 16ರಲ್ಲಿ ಆರೋಪಪಟ್ಟಿ ದಾಖಲಿಸಲಾಗಿದ್ದು, ಉಳಿದ ಮೂರು ಪ್ರಕರಣಗಳಲ್ಲಿ ಸರಯಾದ ಸಾಕ್ಷಾಧಾರ ಸಿಗದೆ ಪ್ರಕರಣಗಳನ್ನು ಮುಚ್ಚಲಾಗಿತ್ತು. ಮೃತಪಟ್ಟವರಲ್ಲಿ ಬಹುತೇಕ ಯುವತಿಯರೇ ಆಗಿದ್ದರು. ಇವರಿಬ್ಬರಿಗೆ 9 ಪ್ರಕರಣಗಳಲ್ಲಿ ಶುಕ್ಷೆಗೊಳಗಾಗಿದ್ದಾರೆ. ಉಳಿದ 7 ವಿಚಾರಣೆ ಹಂತದಲ್ಲಿವೆ.

click me!