ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಎಚ್‌ಎಎಲ್ ದಿಟ್ಟ ಉತ್ತರ

By Web DeskFirst Published Sep 22, 2018, 9:26 AM IST
Highlights

ಇತ್ತೀಚೆಗಷ್ಟೇ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಇಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದರು. ಆ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆ ವಿರುದ್ಧ ‘ಸ್ಟ್ಯಾಂಡಪ್ ಫಾರ್ ಇಟ್‌ಸೆಲ್ಫ್’ ಚಳವಳಿಯೂ ಆರಂಭವಾಗಿತ್ತು. ಆ ಹೇಳಿಕೆಗೆ ಸದ್ಯ ಸ್ವತಃ ಎಚ್‌ಎಎಲ್ ಪ್ರತಿಕ್ರಿಯೆ ನೀಡಿದೆ. 

ಬೆಂಗಳೂರು (ಸೆ. 22): ಇತ್ತೀಚೆಗಷ್ಟೇ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಇಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದರು.

ಆ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆ ವಿರುದ್ಧ ‘ಸ್ಟ್ಯಾಂಡಪ್ ಫಾರ್ ಇಟ್‌ಸೆಲ್ಫ್’ ಚಳವಳಿಯೂ ಆರಂಭವಾಗಿತ್ತು. ಆ ಹೇಳಿಕೆಗೆ ಸದ್ಯ ಸ್ವತಃ ಎಚ್‌ಎಎಲ್ ಪ್ರತಿಕ್ರಿಯೆ ನೀಡಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮುಂಬೈ ಯೂತ್ ಕಾಂಗ್ರೆಸ್ ಎಚ್‌ಎಎಲ್ ಹೆಸರಿನ ಟ್ವೀಟರ್ ಖಾತೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಪ್ರತಿಯಾಗಿ ತನ್ನ ಶಕ್ತಿ ಏನು ಎಂದು ಹೇಳಿರುವ ಸಂದೇಶವನ್ನು ಶೇರ್ ಮಾಡಿದೆ. ಅದರಲ್ಲಿ ಎಚ್‌ಎಎಲ್‌ಗೆ ರಫೇಲ್‌ಗಳನ್ನು ನಿರ್ಮಿಸುವ ಶಕ್ತಿ ಇಲ್ಲ ಎಂದವರು ಇದನ್ನು ನೋಡಲಿ ಎಂದು ಎಚ್‌ಎಎಲ್ ನಿರ್ಮಿಸಿದ ಯುದ್ಧ ವಿಮಾನಗಳ ಪಟ್ಟಿಯನ್ನು ನೀಡಿಲಾಗಿದೆ. ಸದ್ಯ ಈ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆದರೆ ನಿಜಕ್ಕೂ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಎಚ್‌ಎಎಲ್ ಟಾಂಗ್ ನೀಡಿದ್ದು ನಿಜವೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ. ವಾಸ್ತವವಾಗಿ ಎಚ್‌ಎಎಲ್ ಹೆಸರಿನ ಟ್ವೀಟರ್ ಖಾತೆ ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್‌ನ ಅಧಿಕೃತ ಖಾತೆಯೇ ಅಲ್ಲ. ಸ್ವತಃ ಎಚ್‌ಎಎಲ್ ಕೂಡ ಇದು ಅಧಿಕೃತ ಟ್ವೀಟರ್ ಖಾತೆ ಅಲ್ಲ ಎಂದು ಸ್ಪಷ್ಟಪಡಿಸಿದೆ.

-ವೈರಲ್ ಚೆಕ್ 

click me!