ಪ್ರಧಾನಿ ರಾಜೀನಾಮೆಗೆ ಕಾರಣವಾದ ತೈಲ ಬೆಲೆ ಏರಿಕೆ

By Web DeskFirst Published Jul 15, 2018, 5:31 PM IST
Highlights
  • ಹೈಟಿಯ ಪ್ರಧಾನಿ ಜಾಕ್ ಗಯ್ ಲಫಾಂಟ್'ಟೆಂಟ್ ತೈಲ ಬೆಲೆ ಏರಿಕೆಯಿಂದಾದ ಪ್ರಧಾನಿ ಹುದ್ದೆಗೆ ರಾಜೀನಾಮೆ 
  • ಕೆಲ ದಿನಗಳ ಹಿಂದಷ್ಟೆ ತೈಲ ಬೆಲೆಗಳನ್ನು ಶೇ.51 ರಷ್ಟು ಏರಿಸಿದ್ದರು

ಪೋರ್ಟ್- ಹು- ಪ್ರಿನ್ಸ್(ಜು.15): ತೈಲ ಬೆಲೆ ಏರಿಕೆ ಕರ್ನಾಟಕದಲ್ಲಿ ಮಾತ್ರ  ಸದ್ದು ಮಾಡುತ್ತಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲೂ ಪ್ರತಿಭಟನೆಗೆ ಕಾರಣವಾಗಿ ಪ್ರಭಾವಿ ವ್ಯಕ್ತಿಯೊಬ್ಬರು ರಾಜೀನಾಮೆ ನೀಡಿದ್ದಾರೆ.   

ಉತ್ತರ ಅಮೆರಿಕಾದ ಖಂಡದ ಪ್ರಮುಖ ರಾಷ್ಟ್ರ ಹೈಟಿಯ ಪ್ರಧಾನಿ ಜಾಕ್ ಗಯ್ ಲಫಾಂಟ್'ಟೆಂಟ್ ತೈಲ ಬೆಲೆ ಏರಿಕೆಯಿಂದಾದ ಉಂಟಾದ ಗಲಭೆಯನ್ನು ನಿಯಂತ್ರಿಸಲಾಗದೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಕೆಲವು ದಿನಗಳ ಹಿಂದೆ ಜಾಕ್ ಗಯ್  ಅವರು  ಐಎಂಎಫ್'ನೊಂದಿಗೆ ಆದ ಒಪ್ಪಂದದ ಮೇರೆಗೆ ಪೆಟ್ರೋಲ್, ಡೀಸೆಲ್ ಹಾಗೂ ಸೀಮೆಎಣ್ಣೆ ಬೆಲೆಗಳನ್ನು ಶೇ.38 ರಿಂದ 51ಕ್ಕೆ ಏರಿಸಿದ್ದರು. ಈ ಕಾರಣದಿಂದ ರಾಷ್ಟ್ರದ್ಯಂತ ಪ್ರತಿಭಟನೆಗಳು ಹೆಚ್ಚಾಗಿ ಗಲಭೆಗಳಿಗೆ ತಿರುಗಿದ್ದವು. ಹಲವು ಕಡೆ ಸಾರ್ವಜನಿಕ ಆಸ್ತಿಗೆ ಹಾನಿಯುಂಟಾಗಿತ್ತು.

ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ನಡೆದ ಘಟನೆಯಿಂದಾಗಿ 7 ಮಂದಿ ಮೃತಪಟ್ಟು ನೂರಾರು ಜನರು ಗಾಯಗೊಂಡಿದ್ದರು. ಗಲಾಟೆ ನಿಯಂತ್ರಣಕ್ಕೆ ಬಾರದ ಕಾರಣ ತೈಲ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆದಿದ್ದರು. ಆದರೂ ಪರಿಸ್ಥಿತಿ ನಿಯಂತ್ರಕ್ಕೆ ಬಂದಿರಲಿಲ್ಲ. ಸಂಸತ್ತಿನಲ್ಲಿ ಪ್ರಧಾನಿ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸುವ ಮುನ್ನವೆ ಜಾಕ್ ಗಯ್  ರಾಜೀನಾಮೆ ನೀಡಿದ್ದಾರೆ. 57 ವರ್ಷದ ಜಾಕ್ ಗಯ್ 2017ರ ಮಾರ್ಚ್'ನಲ್ಲಿ ಅಧಿಕಾರಕ್ಕೆ ಏರಿದ್ದರು ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.


 

click me!