ನವೆಂಬರ್'ನಲ್ಲಿ ಟ್ರಂಪ್ ಏಷ್ಯಾಕ್ಕೆ: ಭಾರತಕ್ಕೆ ಭೇಟಿ..!

By Suvarna Web DeskFirst Published Oct 1, 2017, 12:39 PM IST
Highlights

ಮನಿಲಾದಲ್ಲಿ ಟ್ರಂಪ್ ಮತ್ತು ಮೋದಿ ಭೇಟಿಯಾದರೆ, ಅದು ಅವರ ನಡುವಿನ 3ನೇ ಭೇಟಿಯಾಗುತ್ತದೆ.

ವಾಷಿಂಗ್ಟನ್(ಅ.01): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್‌'ನಲ್ಲಿ ಚೀನಾ ಸಹಿತ ಐದು ಏಷ್ಯಾ ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ ಈ ಪ್ರವಾಸದಲ್ಲಿ ಭಾರತ ಸೇರಿಲ್ಲ. ಆದರೆ ಫಿಲಿಪ್ಪೀನ್ಸ್‌'ನ ಮನಿಲಾದಲ್ಲಿ ನಡೆಯಲಿರುವ ಏಷ್ಯಾ ಸಮಾವೇಶದ ನಡುವೆ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಜೊತೆ ಮಾತುಕತೆ ನಡೆಯುವ ಸಾಧ್ಯತೆಯಿದೆ.

ಮನಿಲಾದಲ್ಲಿ ಟ್ರಂಪ್ ಮತ್ತು ಮೋದಿ ಭೇಟಿಯಾದರೆ, ಅದು ಅವರ ನಡುವಿನ 3ನೇ ಭೇಟಿಯಾಗುತ್ತದೆ. ಜೂನ್ ವೇಳೆ ವಾಷಿಂಗ್ಟನ್ ಮತ್ತು ಜುಲೈನಲ್ಲಿ ಜರ್ಮನಿಯಲ್ಲಿ ನಡೆದ ಜಿ20 ಸಮಾವೇಶದ ಸಂದರ್ಭ ಅವರು ಎರಡನೇ ಬಾರಿ ಭೇಟಿಯಾಗಿದ್ದರು. ದಕ್ಷಿಣ ಏಷ್ಯಾಕ್ಕೆ ಸಂಬಂಧಿಸಿದ ತನ್ನ ನೀತಿ ಪ್ರಕಟಿಸಿದ ಬಳಿಕ, ಮೋದಿ ಮತ್ತು ಟ್ರಂಪ್ ನಡುವಿನ ಮೊದಲನೇ ಭೇಟಿ ಇದಾಗಿದೆ.

ನ 3-14ರ ನಡುವೆ ಏಷ್ಯಾ ಪ್ರವಾಸದ ವೇಳೆ ಟ್ರಂಪ್ ಚೀನಾ, ವಿಯೆಟ್ನಾಂ, ಜಪಾನ್, ದಕ್ಷಿಣ ಕೊರಿಯಾ ಮತ್ತು ಫಿಲಿಪ್ಪೀನ್ಸ್‌'ಗೆ ಭೇಟಿ ನೀಡಲಿದ್ದಾರೆ. ವಿಯೆಟ್ನಾಂನಲ್ಲಿನ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಸಮಾವೇಶದಲ್ಲೂ ಅವರೂ ಭಾಗವಹಿಸಲಿದ್ದಾರೆ.

click me!