
ಲಾಹೋರ್[ಅ.01]: ಮುಂಬೈ ದಾಳಿ ಪ್ರಕರಣ ಸೇರಿ ಭಾರತದಲ್ಲಿ ಹಲವು ಸ್ಫೋಟ ಪ್ರಕರಣಗಳ ಮಾಸ್ಟರ್‌ಮೈಂಡ್ ಆಗಿರುವ ಜಮಾತ್ ಉದ್ ದವಾ ಉಗ್ರ ಹಫೀಜ್ ಸಯೀದ್ ಪ್ರಾಣ ಬೆದರಿಕೆ ಎದುರಿಸುತ್ತಿದ್ದಾನೆ ಎಂದು ಆತನ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಹಫೀಜ್, ಅಜರ್ ವಿರುದ್ಧ ಕ್ರಮಕ್ಕೆ ಪಾಕಿಸ್ತಾನಕ್ಕೆ ಅಮೆರಿಕ ವಾರ್ನಿಂಗ್!
ಈ ಹಿನ್ನೆಲೆಯಲ್ಲಿ ಮುಂಬೈ ದಾಳಿಗೆ ಹಣ ಸಹಾಯ ಮಾಡಿದ ಪ್ರಕರಣದಲ್ಲಿ ಸಯೀದ್ ಭಾಗಿಯಾಗಿರುವ ಪ್ರಕರಣವನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜ್ರನ್‌ವಾಲಾ ನ್ಯಾಯಾಲಯದಿಂದ ಲಾಹೋರ್ ನ್ಯಾಯಾಲಯಕ್ಕೆ ವರ್ಗಾಯಿಸಲು ನಿರ್ಧರಿಸಲಾಗಿದೆ.
UAPA ತಿದ್ದುಪಡಿ ಕಾನೂನು: ದಾವೂದ್ ಸೇರಿ ನಾಲ್ವರು ಉಗ್ರ ಪಟ್ಟಿಗೆ!
ಈ ಕುರಿತು ಸಯೀದ್ ಮತ್ತು ಪ್ರಕರಣದ ಇತರೆ ಆರೋಪಿಗಳು ಮಾಡಿದ್ದ ಮನವಿಯನ್ನು ಲಾಹೋರ್ ಹೈಕೋರ್ಟ್‌ನ ಮಾನ್ಯ ಮಾಡಿದೆ. ಇದು ಪ್ರಕರಣದಿಂದ ಸಯೀದ್ ಬಚಾವ್‌ಗೆ ಮಾಡಿದ ತಂತ್ರ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.