ಪರ್ಯಾಯ ಸೇನಾಪಡೆ ಕಟ್ಟಿದ ಉಗ್ರ ಹಫೀಜ್!

Published : Dec 24, 2017, 09:03 AM ISTUpdated : Apr 11, 2018, 01:09 PM IST
ಪರ್ಯಾಯ ಸೇನಾಪಡೆ ಕಟ್ಟಿದ ಉಗ್ರ ಹಫೀಜ್!

ಸಾರಾಂಶ

ಸಯೀದ್‌ಗೆ ದಿನದ 24 ತಾಸೂ ಶಸ್ತ್ರಧಾರಿಗಳ ಭದ್ರತೆ ಈ ಸೇನೆ ದಿನದ 24 ಗಂಟೆಯೂ ಉಗ್ರ ಹಫೀಜ್‌ಗೆ ಪೂರ್ಣ ಪ್ರಮಾಣದಲ್ಲಿ ಭದ್ರತೆ ನೀಡಲಿದೆ.

ಇಸ್ಲಾಮಾಬಾದ್: ಮುಂಬೈ ಸರಣಿ ದಾಳಿಯ ಸಂಚುಕೋರ, ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಪರ್ಯಾಯ ಸೈನ್ಯ ಕಟ್ಟಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಹಫೀಜ್‌ನ ಈ ಸೇನೆಗೆ ಸೇರಿ, ತರಬೇತಿ ಪೂರ್ಣಗೊಂಡವರಿಗೆ ಇತ್ತೀಚೆಗೆ ಗುಜ್ರನ್‌ವಾಲಾದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ ಸ್ವತಃ ಉಗ್ರ ಹಫೀಜ್ ಸಯೀದ್ ಭಾಗಿಯಾಗಿದ್ದ ಎನ್ನಲಾಗಿದೆ.

ಈ ಸೇನೆಯನ್ನು ಉಗ್ರ ಹಫೀಜ್ ಸಯೀದ್‌ನ ರಕ್ಷಣೆಗಾಗಿ ರಚಿಸಲಾಗಿದ್ದು, ತರಬೇತಿಯ ಕಡೆಯ ದಿನ ಸೇನೆಗೆ ನಿಯೋಜನೆಗೊಂಡವರೆಲ್ಲಾ ತಮ್ಮ ನಾಯಕನ್ನು ಪ್ರಾಣ ಒತ್ತೆ ಇಟ್ಟಾದರೂ ರಕ್ಷಿಸುವ ಪ್ರತಿಜ್ಞೆ ಸ್ವೀಕರಿಸಿದ್ದಾರೆ

ಈ ಸೇನೆ ದಿನದ 24 ಗಂಟೆಯೂ ಉಗ್ರ ಹಫೀಜ್‌ಗೆ ಪೂರ್ಣ ಪ್ರಮಾಣದಲ್ಲಿ ಭದ್ರತೆ ನೀಡಲಿದೆ. ಸೇನಾ ಸಿಬ್ಬಂದಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಲಾಗಿದ್ದು, ಹಫೀಜ್ ಪಾಕಿಸ್ತಾನದಲ್ಲಿ ಎಲ್ಲೆಲ್ಲಿ ಸಂಚರಿಸುತ್ತಾನೋ ಆ ಎಲ್ಲಾ ಪ್ರದೇಶಗಳಿಗೆ ಈ ಸೇನೆ ತೆರಳಿ ಭದ್ರತೆಯ ಉಸ್ತುವಾರಿ ವಹಿಸಿಕೊಳ್ಳಲಿದೆ.

ಹಾಗೆಂದು ಪಾಕ್‌ನಲ್ಲಿ ಉಗ್ರರು ತಮ್ಮದೇ ಪ್ರತ್ಯೇಕ ಸೇನೆ ರಚಿಸುವುದು ಇದೇ ಮೊದಲಲ್ಲ. ಜೈಷ್ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್, ಹುಜಿ ಸೇರಿದಂತೆ 10ಕ್ಕೂ ಹೆಚ್ಚು ಉಗ್ರ ಸಂಘಟನೆಗಳು ತಮ್ಮ ನಾಯಕರ ರಕ್ಷಣೆಗಾಗಿ ಹೀಗೆ ಸೇನೆ ರಚಿಸಿಕೊಂಡಿವೆ.

ಈ ಎಲ್ಲಾ ಸೇನೆಗಳು ಯುನೈಟೆಡ್ ಜಿಹಾದಿ ಕೌನ್ಸಿಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತ ವಿರೋಧಿ ಉಗ್ರ ಬಣಗಳನ್ನು ಒಗ್ಗೂಡಿಸುವ ಸಲುವಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಈ ಕೌನ್ಸಿಲ್ ಅನ್ನು ರಚಿಸಿದೆ ಎನ್ನಲಾಗಿದೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯಪುರ: ಕಬ್ಬು ತುಂಬಿದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ, ಸ್ಥಳದಲ್ಲೇ ಸವಾರ ದುರ್ಮರಣ
ಬೆಡ್‌ಶೀಟ್ ಒಂದೇ ಸಾಕು ನಿಮ್ಮ ಮನೆ ಲಕ್ಸುರಿ ವಿಲ್ಲಾ ಆಗಲು: ಸ್ಪ್ರಿಂಗ್ ಸೀಸನ್‌ಗಾಗಿ ಇಲ್ಲಿವೆ 5 ಸೂಪರ್ ಡಿಸೈನ್ಸ್!