
ಗುಜರಾತ್ (ಡಿ.18): ಗುಜರಾತ್ ಚುನಾವಣೆ ಫಲಿತಾಂಶ. ಇದು ಬರೀ ಫಲಿತಾಂಶವಲ್ಲ. ಎರಡೂ ಪಕ್ಷಗಳ ವ್ಯಕ್ತಿಗಳ ರಾಜಕೀಯ ಭವಿಷ್ಯ ನಿರ್ಧರಿಸುವ ಫಲಿತಾಂಶ. ಇಡೀ ದೇಶ ಗುಜರಾತ್ ರಿಸಲ್ಟ್ಗಾಗಿ ಬಿಟ್ಟ ಕಣ್ಣು ಬಿಟ್ಟಂಗೆ ಕಾದು ಕೂತಿದೆ.
ಇಡೀ ದೇಶವೇ ಗುಜರಾತ್ ಚುನಾವಣೆ ಫಲಿತಾಂಶಕ್ಕಾಗಿ ಕಾಯುತ್ತಿದೆ. ಅದು ಸೆಮಿಫೈನಲ್. ಪ್ರಧಾನಿ ನರೇಂದ್ರ ಮೋದಿ - ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಣೆಬರಹ ಬರೆಯುವ ಫಲಿತಾಂಶವಿದು.
ವಿಜಯದ ಮಾಲೆ ಯಾರ ಕೊರಳಿಗೆ?
ಈಗಾಗಲೇ ಹಲವು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಸ್ಪಷ್ಟ ಬಹುಮತ ಕೊಟ್ಟಿವೆ. ಪ್ರಥಮ ಹಂತದಲ್ಲಿ ಶೇ.68, ಎರಡನೇ ಹಂತದಲ್ಲಿ 68.7 ಮತದಾನ ನಡೆದಿದೆ. ಆದ್ರೆ ಮ್ಯಾಜಿಕ್ ನಂಬರ್ 92 ಸ್ಥಾನ ಗೆದ್ದು ಯಾರು ವಿಜಯದ ಪತಾಕೆ ಹಾರಿಸ್ತಾರೆ ಅನ್ನೋದೇ ಕುತೂಹಲ.
ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯವಾದ್ದರಿಂದ ಪ್ರಧಾನಿ ಗುಜರಾತ್ ಚುನಾವಣೆ ಗೆಲುವು ಭಾರಿ ಪ್ರತಿಷ್ಠೆಯಾಗಿದೆ. ಗುಜರಾತ್ ಗೆಲುವು ಮೋದಿಗೆ ಎಷ್ಟೋ ಪ್ರತಿಷ್ಠೆಯಾಗಿದೆ ಅಂದ್ರೆ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮೆಗಾ ಱಲಿ ಮೂಲಕ ಮತಯಾಚಿಸಿದ್ದರು. ಇನ್ನೂ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಪಟ್ಟ ನಂತ್ರ ಗುಜರಾತ್ ಚುನಾವಣಾ ಫಲಿತಾಂಶ ದೊಡ್ಡ ಅಗ್ನಿ ಪರೀಕ್ಷೆಯಾಗಿದೆ. ಇಲ್ಲಿಯ ಗೆಲುವು ದೇಶದ ಹಲವು ರಾಜಕೀಯ ಮನ್ವಂತರಕ್ಕೆ ಕಾರಣವಾಗುವುದು ಅಷ್ಟೇ ಸತ್ಯ.
ಗುಜರಾತ್ನಲ್ಲಿ ಬಿಜೆಪಿ 22 ವರ್ಷಗಳಿಂದ ಅಧಿಕಾರದಲ್ಲಿದೆ.. ಇಲ್ಲಿ ಮತ್ತೆ ಅಧಿಕಾರ ಉಳಿಸಿಕೊಳ್ಳುವುದು ಬಿಜೆಪಿ ನಾಯಕರಿಗೆ ಭಾರಿ ಸವಾಲು. ಬಿಜೆಪಿ ಚಾಣಕ್ಯ ಅಂದೇ ಖ್ಯಾತಿಯಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುಜರಾತ್ನವರೇ ಆಗಿರೋದರಿಂದ ಈ ಗೆಲುವು ಅನಿವಾರ್ಯ.
ಹಾರ್ದಿಕ್ ಪಟೇಲ್, ಜಿಗ್ನೇಶ್ ವೇಮಾನಿ, ಅಲ್ಪೇಶ್ ಠಾಕೂರ್.. ಗುಜರಾತ್ನಲ್ಲಿ ಈ ಮೂರು ಯುವ ನಾಯಕರು ತಮ್ಮ ವಿಭಿನ್ನ ಹೋರಾಟಗಳಿಂದಲೇ ರಾಜಕೀಯಕ್ಕೆ ಬಂದವರು.. ಗುಜರಾತ್ ಚುನಾವಣೆ ಈ ಮೂವರ ಮುಂದಿನ ಭವಿಷ್ಯವನ್ನು ಈ ಫಲಿತಾಂಶ ನಿರ್ಧರಿಸಲಿದೆ.
ಗುಜರಾತಿಯರನ್ನು ಭಾವನಾತ್ಮಕವಾಗಿ ಸೆಳೆದಿರುವ ಮೋದಿಯವರ 22 ವರ್ಷಗಳ ಅಧಿಕಾರ ಉಳಿಯುತ್ತಾ...?ದೇಶಾದ್ಯಂತ ಸೋತು ಸುಣ್ಣವಾಗುತ್ತಿರುವ ಕಾಂಗ್ರೆಸ್ಗೆ ಗುಜರಾತ್ ಫಲಿತಾಂಶ ಟಾನಿಕ್ ನೀಡುತ್ತಾ...? ಸರ್ಕಾರದ ವಿರುದ್ಧ ಬಂಡಾಯವೆದ್ದವರಿಗೆ ಗೆಲುವು ಸಿಗುತ್ತಾ..? ಎಐಸಿಸಿ ನೂತನ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿಗೆ ಗೆಲುವಿನ ಸ್ವಾಗತ ಸಿಗುತ್ತಾ..? ಇವೆಲ್ಲಾ ಪ್ರಶ್ನೆಗಳಿಗೆ ಗುಜರಾತ್ ಚುನಾವಣೆ ಫಲಿತಾಂಶ ಉತ್ತರ ನೀಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.