
ತುಮಕೂರು (ಡಿ.17): ಕಾಂಗ್ರೆಸ್'ನವರಿಗೆ ಮಾತ್ರ ಸಾಲ ಹಂಚೋ ಸಮಾವೇಶ ಮಾಡುತ್ತೇನೆ. ಒಂದು ಸಾಲ ಕೊಡೋ ಸಮಾವೇಶ ಮಾಡುತ್ತೇನೆ. ಸಾಲ ತೆಗೆದುಕೊಂಡವರು ಕಾಂಗ್ರೆಸ್'ಗೆ ವೋಟ್ ಹಾಕಬೇಕು. ಅಂತಹವರು ಮಾತ್ರ ಸಾಲಕ್ಕೆ ಅರ್ಜಿ ಹಾಕಿ ಬೇರೆಯವರು ಹಾಕಬೇಡಿ. ನನ್ನ ಕ್ಷೇತ್ರದವರಿಗೂ ನಾನು ಹೀಗೆ ಹೇಳುತ್ತೇನೆ ಎಂದು ಕೊರಟಗೆರೆ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ಸಾಲ ತೆಗೆದುಕೊಂಡು ನನಗೇ ವೋಟ್ ಹಾಕಬೇಕು ಅಂತ ನನ್ನ ಕ್ಷೇತ್ರದ ಜನತೆಗೆ ಹೇಳುತ್ತೇನೆ. ಈಗ ಸಾಲ ತೆಗೆದುಕೊಳ್ಳಿ. ಮತ್ತೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಲ ಮನ್ನವಾಗುತ್ತದೆ. ಸಾಲ ಹಂಚೋ ಸಮಾವೇಶ ಮಾಡುತ್ತೇವೆ. ಕಾಂಗ್ರೆಸ್'ನವರು ಬಿಟ್ಟು ಬೇರೆ ಯಾರೂ ಬರಬೇಡಿ. ಕಾಂಗ್ರೆಸ್'ಗೆ ವೋಟ್ ಹಾಕುವವರು ಮಾತ್ರ ಸಾಲ ಹಂಚುವ ಸಮಾವೇಶಕ್ಕೆ ಬನ್ನಿ ಎಂದು ವಿವಾದಾತ್ಮಕವಾಗಿ ಶಾಸಕ ರಾಜಣ್ಣ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.