ನಿರ್ಭಯಾ ಕೇಸಿಗೆ ಇಂದಿಗೆ 5 ವರ್ಷ ಭರ್ತಿ; ಆದ್ರೆ ಶಿಕ್ಷೆ ಮಾತ್ರ ಜಾರಿಯಾಗಿಲ್ಲ

By Suvarna Web DeskFirst Published Dec 17, 2017, 3:08 PM IST
Highlights

ಪ್ರಕರಣದ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಪ್ರತಿಭಟನೆಗಳು ನಡೆದು, ಅತ್ಯಾಚಾರ ಪ್ರಕರಣಗಳಿಗೆ ಕಠಿಣ ಶಿಕ್ಷೆ ನೀಡುವ ಕುರಿತಂತೆ ಒತ್ತಾಯಗಳು ಕೇಳಿ ಬಂದಿದ್ದವು.

ನವದೆಹಲಿ(ಡಿ.16): ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದಿಗೆ ಐದು ವರ್ಷಗಳಾದವು. 2012, ಡಿ.16ರಂದು ನಡೆದ ಈ ಭೀಕರ ಅತ್ಯಾಚಾರ, ಹತ್ಯೆ ಪ್ರಕರಣದ ದೋಷಿಗಳಿಗೆ ಮರಣ ದಂಡನೆ ಘೋಷಣೆಯಾಗಿದ್ದರೂ ಇನ್ನೂ ಶಿಕ್ಷೆ ಜಾರಿಯಾಗಿಲ್ಲ.

ಪ್ರಕರಣದ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಪ್ರತಿಭಟನೆಗಳು ನಡೆದು, ಅತ್ಯಾಚಾರ ಪ್ರಕರಣಗಳಿಗೆ ಕಠಿಣ ಶಿಕ್ಷೆ ನೀಡುವ ಕುರಿತಂತೆ ಒತ್ತಾಯಗಳು ಕೇಳಿ ಬಂದಿದ್ದವು. ದೋಷಿಗಳಾದ ಪವನ್, ವಿನಯ್, ಮುಕೇಶ್ ಸಿಂಗ್ ಮತ್ತು ಅಕ್ಷಯ್ ಕುಮಾರ್ ಸಿಂಗ್‌'ಗೆ ಮರಣ ದಂಡನೆ ಘೋಷಣೆಯಾಗಿದೆ.

ಐದನೇ ಆರೋಪಿ ರಾಮ್ ಸಿಂಗ್ ಜೈಲ್‌'ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಪರಾಧಿಯೊಬ್ಬ ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಯಾಗಿದ್ದಾನೆ.

click me!