ಮೋದಿ ಭದ್ರತೆಗೆ ನಿಯೋಜನೆ ಆಗಿದ್ದ ಪೊಲೀಸ್ ಅಧಿಕಾರಿ ಆತ್ಮಹತ್ಯೆ!

By Web DeskFirst Published Sep 18, 2019, 9:21 AM IST
Highlights

ಮೋದಿ ಭದ್ರತೆಗೆ ನಿಯೋಜನೆ ಆಗಿದ್ದ ಎಸ್‌ಐ ಗುಂಡಿಕ್ಕಿ ಆತ್ಮಹತ್ಯೆ| ತಾವೇ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾದ ಅಧಿಕಾರಿ

ಅಹಮದಾಬಾದ್‌[ಸೆ.18]: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸ್‌ ಅಧಿಕಾರಿ ತಾವೇ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗುಜರಾತ್‌ನ ನರ್ಮದಾ ಜಿಲ್ಲೆಯ ಕೇವಾಡಿಯಾ ಕಾಲೋನಿಯಲ್ಲಿ ನಡೆದಿದೆ.

ಮ್ಮ ಜನ್ಮ ದಿನದ ಪ್ರಯುಕ್ತ ಪ್ರಧಾನಿ ಮೋದಿ ಅವರು ತವರು ರಾಜ್ಯ ಗುಜರಾತ್‌ಗೆ ಭೇಟಿ ನೀಡಿದ್ದಾರೆ. ಜೊತೆಗೆ, 138.68 ಅಡಿ ಎತ್ತರದ ಸರ್ದಾರ್‌ ಸರೋವರ ಡ್ಯಾಂ ಭರ್ತಿ ತುಂಬಿದ ಕಾರಣಕ್ಕಾಗಿ ಆಚರಿಸಲಾಗುತ್ತಿರುವ ನಮಾಮಿ ದೇವಿ ನರ್ಮದೆ ಮಹೋತ್ಸವದಲ್ಲಿ ಭಾಗವಹಿಸುವ ಸಲುವಾಗಿ ಮಂಗಳವಾರ ಗುಜರಾತ್‌ಗೆ ಭೇಟಿ ನೀಡಿದ್ದಾರೆ.

ಈ ಕಾರ್ಯಕ್ರಮದ ಭದ್ರತಾ ವ್ಯವಸ್ಥೆಯ ಮೇಲೆ ನಿಗಾವಹಿಸುವ ಜವಾಬ್ದಾರಿಯನ್ನು ಪಿಎಸ್‌ಐ ಎನ್‌.ಸಿ ಫಿನವಿಯಾ ಅವರು ವಹಿಸಿದ್ದರು. ಆದರೆ, ಮಂಗಳವಾರ ಫಿನವಿಯಾ ತಮ್ಮ ಮೇಲೆ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಅವರ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

click me!