4 ದಿನದಲ್ಲಿ 3 ನೇ ಕಾಂಗ್ರೆಸ್ ಶಾಸಕ ಪಕ್ಷಕ್ಕೆ ರಾಜೀನಾಮೆ! ಗುಜರಾತ್‌ನ ಕಾಂಗ್ರೆಸ್ ಶಾಸಕ ವಲ್ಲಭ ಧಾರಾವಿಯಾ ರಾಜಿನಾಮೆ |
ಅಹಮದಾಬಾದ್ (ಮಾ.12): ಗುಜರಾತ್‌ನ ಕಾಂಗ್ರೆಸ್ ಶಾಸಕ ವಲ್ಲಭ ಧಾರಾವಿಯಾ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರೇವಣ್ಣ ತಲೆಹಾಕದಿದ್ದರೆ ನಿಖಿಲ್ ಗೆಲುವು ನಿಶ್ಚಿತ: ಕುಮಾರಸ್ವಾಮಿ
ಇದರೊಂದಿಗೆ ಕಳೆದ 4 ದಿನಗಳಲ್ಲಿ ಕಾಂಗ್ರೆಸ್‌ನ 3ನೇ ಶಾಸಕ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದಂತೆ ಆಗಿದೆ. ಇದಕ್ಕೂ ಮುನ್ನ ಶಾಸಕ ಪುರುಸೋತ್ತಮ ಸಾಬರಿಯಾ ಹಾಗೂ ಜವಾಹರ ಚಾವಡಾ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದರು.
ಈ ಪೈಕಿ ಚಾವಡಾ ಮಾ.9ರಂದು ಸಿಎಂ ವಿಜಯ್ ರೂಪಾನಿ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈಗ 182ಸದಸ್ಯತ್ವದ ವಿಧಾನಸಭೆಯಲ್ಲಿ 100 ಬಿಜೆಪಿ, 71ಕಾಂಗ್ರೆಸ್ ಶಾಸಕರು ಇದ್ದಾರೆ.
ಯೋಗೇಶ್ವರ್ ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ?
ಧಾರಾವಿಯಾ ಜಮ್ನಾನಗರ್ ಶಾಸಕರಾಗಿದ್ದರು. ಇವರು ಮೊದಲು ಬಿಜೆಪಿ ಪಾಳಯದಲ್ಲೇ ಇದ್ದರು. ನಂತರ 2017 ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಸೇರಿದ್ದರು. ಇದೀಗ ಮತ್ತೆ ಬಿಜೆಪಿ ಸೇರುತ್ತಿದ್ದಾರೆ.