ಸಿರಿಯಾದಲ್ಲಿ ಐಸಿಸ್‌ ಬಹುತೇಕ ನಿರ್ನಾಮ, 1 ಹಳ್ಳಿಯಲ್ಲಿ ಬಾಕಿ

Published : Mar 12, 2019, 11:32 AM IST
ಸಿರಿಯಾದಲ್ಲಿ ಐಸಿಸ್‌ ಬಹುತೇಕ  ನಿರ್ನಾಮ, 1 ಹಳ್ಳಿಯಲ್ಲಿ ಬಾಕಿ

ಸಾರಾಂಶ

ಸಿರಿಯಾದಲ್ಲಿ ಐಸಿಸ್‌ ಉಗ್ರರ ಅಡಗುತಾಣಗಳ ಮೇಲೆ ಅಮೆರಿಕ ಬೆಂಬಲಿತ ಸೇನಾ ಪಡೆಗಳಿಂದ ಕಾರ್ಯಾಚರಣೆ | ಐಸಿಸ್‌ ಉಗ್ರರು, ಇದೀಗ ಬಾಗಹೌಜ್‌ ಎಂಬ ಗ್ರಾಮಕ್ಕೆ ಮಾತ್ರ ಸೀಮಿತ

ಡಮಾಸ್ಕಸ್‌ (ಮಾ. 12): ಸಿರಿಯಾದಲ್ಲಿ ಐಸಿಸ್‌ ಉಗ್ರರ ಅಡಗುತಾಣಗಳ ಮೇಲೆ ಅಮೆರಿಕ ಬೆಂಬಲಿತ ಸೇನಾ ಪಡೆಗಳು ಭಾನುವಾರದಿಂದ ಅಂತಿಮ ಕಾರ್ಯಾಚರಣೆಗೆ ಇಳಿದಿವೆ.

ಒಂದು ಕಾಲದಲ್ಲಿ ಸಿರಿಯಾದ ಬಹುತೇಕ ಭಾಗವನ್ನು ನಿಯಂತ್ರಣಕ್ಕೆ ಪಡೆದುಕೊಂಡಿದ್ದ ಐಸಿಸ್‌ ಉಗ್ರರು, ಇದೀಗ ನದಿಯೊಂದರ ಪಕ್ಕದ ಬಾಗಹೌಜ್‌ ಎಂಬ ಗ್ರಾಮಕ್ಕೆ ಮಾತ್ರ ಸೀಮಿತವಾಗಿದ್ದಾರೆ.

ಸರ್ಕಾರ ವಶಪಡಿಸಿಕೊಂಡ ಪ್ರದೇಶಗಳಲ್ಲಿ ನಾಗರಿಕರಿಗೆ ಮರಳಲು ಅವಕಾಶ ಕಲ್ಪಿಸಲು ಹಾಗೂ ಜಿಹಾದಿಗಳಿಗೆ ಶರಣಾಗಲು ಗಡುವು ನೀಡಿದ್ದ ಸಿರಿಯಾದ ಡೆಮೊಕ್ರಾಟಿಕ್‌ ಪಡೆಗಳು ಕಳೆದ ಕೆಲವು ವಾರಗಳಿಂದ ಕಾರ್ಯಾಚರಣೆಯನ್ನು ನಿಧಾನಗೊಳಿಸಿದ್ದವು.

ಇದೀಗ ಉಗ್ರರಿಗೆ ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಅಂತಿಮ ಕಾರ್ಯಾಚರಣೆ ಕೈಗೊಳ್ಳಲು ಸರ್ಕಾರ ಅದೇಶಿಸಿದೆ. ಆದರೆ, ಬಾಗಹೌಜ್‌ ಗ್ರಾಮದಲ್ಲಿ ಸಾವಿರಾರು ನಾಗರಿಕರು ಉಳಿದುಕೊಂಡಿದ್ದು, ಉಗ್ರ ಕಪಿಮುಷ್ಟಿಯಿಂದ ಜನರನ್ನು ಖಾಲಿ ಮಾಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ