ಕಾರ್ಬೆಟ್ ಹುಲಿ ಸಂರಕ್ಷಿತಾರಣ್ಯಕ್ಕೆ ಕಾಲಿಟ್ಟಿರೋ ಜೋಕೆ...!

By Suvarna Web DeskFirst Published Feb 22, 2017, 2:35 PM IST
Highlights

ವನ್ಯಜೀವಿ ಸಂರಕ್ಷಣೆಗಾಗಿ ಈ ಹಿಂದೆ 2003ರ ಸರ್ಕಾರ ಹೊರಡಿಸಿದ್ದ ಆದೇಶದನ್ವಯವೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ

ನೈನಿತಾಲ್ (ಫೆ.22): ಇಲ್ಲಿನ ಕಾರ್ಬೆಟ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಹುಲಿ ಬೇಟೆಯನ್ನು ತಡೆಯುವ ನಿಟ್ಟಿನಲ್ಲಿ, ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಜನರು ಕಾಣಿಸಿಕೊಂಡರೆ ಕಂಡಲ್ಲಿ ಗುಂಡು ಹಾರಿಸುವ ಆಜ್ಞೆ ಹೊರಡಿಸಲಾಗಿದೆ. ಅಲ್ಲದೇ ಬೇಟೆಗಾರರ ಅಕ್ರಮ ಪ್ರವೇಶವನ್ನು ಪತ್ತೆಹಚ್ಚಲು ಎರಡು ಡ್ರೋನ್‌'ಗಳನ್ನು ಬಳಸಲಾಗುತ್ತಿದೆ.

ಸಂರಕ್ಷಿತ ಅರಣ್ಯ ಪ್ರದೇಶದ ದಕ್ಷಿಣ ಭಾಗದಲ್ಲಿ ಇತ್ತೀಚೆಗೆ ಬೇಟೆಗಾರರ ಹಾವಳಿ ಹೆಚ್ಚಿದ್ದು ವನ್ಯಮೃಗಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ. ಇದಕ್ಕಾಗಿ 150 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅಲ್ಲದೆ ಅರಣ್ಯದಲ್ಲಿ ಪ್ರಾಣಿಗಳ ಚಲನವಲನದ ಮೇಲೆ ನಿಗಾ ಇಡಲು ಅಳವಡಿಸಲಾಗಿರುವ 388 ಗುಪ್ತ ಕ್ಯಾಮೆರಾಗಳ ಮೂಲಕವೂ ಬೇಟೆಗಾರರ ಮೇಲೆ ಕಣ್ಣಿಡಲಾಗಿದೆ ಎಂದು ಕಾರ್ಬೆಟ್ ಹುಲಿ ಸಂರಕ್ಷಿತ ಅರಣ್ಯ ಇಲಾಖೆ ನಿರ್ದೇಶಕ ಮಧುಕರ್ ಡಕಾಟೆ ತಿಳಿಸಿದ್ದಾರೆ.

ವನ್ಯಜೀವಿ ಸಂರಕ್ಷಣೆಗಾಗಿ ಈ ಹಿಂದೆ 2003ರ ಸರ್ಕಾರ ಹೊರಡಿಸಿದ್ದ ಆದೇಶದನ್ವಯವೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

click me!