ಹರಿಣಿಗಳ ಟೀಂ ವರ್ಕ್'ಗೆ ಶರಣಾದ ಸಿಂಹಳಿಯರು

By suvarna Web DeskFirst Published Jun 3, 2017, 11:29 PM IST
Highlights

ಟಾಸ್ ಗೆದ್ದರೂ ಮೊದಲು ಬ್ಯಾಟಿಂಗ್ ಮಾಡದೆ ಹರಿಣಿಗಳನ್ನು ಕಣಕ್ಕಿಳಿಸಿದ ನಾಯಕ ಉಪುಲ್ ತರಂಗ ತಂಡಕ್ಕೆ ಆರಂಭಿಕ ಆಟಗಾರ ಆಮ್ಲ (103: 115 ಎಸೆತ, 2 ಸಿಕ್ಸ್'ರ್, 5 ಬೌಂಡರಿ) ಆಕರ್ಷಕ ಶತಕ ಹಾಗೂ ಡುಪ್ಲೆಸಿಸ್ ಸಮಯೋಚಿತ ಆಟದ ನೆರವಿನಿಂದ 6 ವಿಕೇಟ್ ನಷ್ಟಕ್ಕೆ 299 ರನ್ ಮೊತ್ತ ಕಲೆ ಹಾಕಿದರು.

ಲಂಡನ್(ಜೂ.03): ಅಶೀಮ್ ಆಮ್ಲ ಅವರ ಆಕರ್ಷಕ ಶತಕ, ಡು ಪ್ಲೆಸಿಸ್ ರಕ್ಷಣಾತ್ಮಕ ಆಟ ಹಾಗೂ ಇಮ್ರಾನ್ ತಾಹಿರ್, ಕ್ರಿಸ್ ಮೋರಿಸ್ ಬೌಲಿಂಗ್ ದಾಳಿಗೆ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾ ತಂಡದೆದುರು 96 ರನ್'ಗಳಿಂದ ಸೋಲು ಅನುಭವಿಸಿದರು.

ಲಂಡನ್'ನ ಕೆನ್ನಿಂಗ್'ಟನ್ ಓವಲ್ ಕ್ರೀಡಾಂಗಣದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಿ ಗ್ರೂಪ್' ತಂಡಗಳ ನಡುವೆ ನಡೆದ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 300 ರನ್'ಗಳ ಬೃಹತ್ ಮೊತ್ತದ ಸವಾಲಿಗೆ ಶ್ರೀಲಂಕಾ ತಂಡ 203 ರನ್'ಗಳಿಗೆ ತನ್ನೆಲ್ಲ ವಿಕೇಟ್  ಕಳೆದುಕೊಂಡು ಸೋಲೊಪ್ಪಿಕೊಂಡಿತು.

Latest Videos

ಟಾಸ್ ಗೆದ್ದರೂ ಮೊದಲು ಬ್ಯಾಟಿಂಗ್ ಮಾಡದೆ ಹರಿಣಿಗಳನ್ನು ಕಣಕ್ಕಿಳಿಸಿದ ನಾಯಕ ಉಪುಲ್ ತರಂಗ ತಂಡಕ್ಕೆ ಆರಂಭಿಕ ಆಟಗಾರ ಆಮ್ಲ (103: 115 ಎಸೆತ, 2 ಸಿಕ್ಸ್'ರ್, 5 ಬೌಂಡರಿ) ಆಕರ್ಷಕ ಶತಕ ಹಾಗೂ ಡುಪ್ಲೆಸಿಸ್ ಸಮಯೋಚಿತ ಆಟದ ನೆರವಿನಿಂದ 6 ವಿಕೇಟ್ ನಷ್ಟಕ್ಕೆ 299 ರನ್ ಮೊತ್ತ ಕಲೆ ಹಾಕಿದರು.

300 ರನ್'ಗಳ ಗುರಿ ಬೆನ್ನಟಿದ ಶ್ರೀಲಂಕಾ ಪಡೆಯ ವಿಕೇಟ್ ಕೀಪರ್ ಡಿಕ್ವೆಲ್ಲಾ(41: 33 ಎಸೆತ, 1 ಸಿಕ್ಸ್'ರ್, 5 ಬೌಂಡರಿ) ಹಾಗೂ ನಾಯಕ ಉಪುಲ್ ತರಂಗ(57:69 ಎಸೆತ, 6 ಬೌಂಡರಿ) ಅವರು ಬಿರುಸಿನ ಆಟವಾಡಿ ಉತ್ತಮ ಆರಂಭ ಒದಗಿಸಿದರಾದರೂ ಅನಂತರ ಬಂದ ಬ್ಯಾಟ್ಸ್'ಮೆನ್'ಗಳು ಇಮ್ರಾನ್ ತಾಹಿರ್,(27/4) ಕ್ರಿಸ್ ಮೋರಿಸ್(32/2) ಅವರ ಬೌಲಿಂಗ್ ದಾಳಿಗೆ ಸ್ತಬ್ಧರಾದರು.ಮಧ್ಯಮ ಕ್ರಮಾಂಕದ ಆಟಗಾರ ಸ್ವಲ್ಪ ಮಟ್ಟಿನ ಪ್ರತಿರೋಧ ತೋರಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ 41.3 ಓವರ್'ಗಳಲ್ಲಿ 203 ರನ್'ಗಳಿಗೆ ತನ್ನೆಲ್ಲ ವಿಕೇಟ್ ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕಾ: 299\6(50) : ಹಶಿಮ್ ಆಮ್ಲಾ: 103, ಡು ಪ್ಲೆಸಿಸ್: 75

ಶ್ರೀಲಂಕಾ:203/10(41.3): ಡಿಕ್ವೆಲ್ಲಾ: 41, ಉಪುಲ್ ತರಂಗ:57, ಇಮ್ರಾನ್ ತಾಹಿರ್,(27/4) ಕ್ರಿಸ್ ಮೋರಿಸ್(32/2)

ಪಂದ್ಯ ಶ್ರೇಷ್ಠ: ಇಮ್ರಾನ್ ತಹೀರ್

 

click me!