
ಬೆಂಗಳೂರು(ಅ.04): ದೇಶದಲ್ಲಿ ಜಿಎಸ್ ಟಿ ಜಾರಿಗೆ ಬಂದ ಮೇಲೆ ಉದ್ಯಮ, ವ್ಯಾಪಾರ, ವಹಿವಾಟಿನ ಮೇಲೆ ಮಹತ್ವದ ಬದಲಾವಣೆಗಳು ನಡೆದಿವೆ. ಆದ್ರೆ ಜಿಎಸ್ ಟಿಯ ಬಿಸಿ ಈಗ ಸಾರಿಗೆ ಸಂಸ್ಥೆಗಳಿಗೂ ತಟ್ಟಿದೆ. ಜಿಎಸ್ ಟಿಯಿಂದ ಸಾರಿಗೆ ಸಂಸ್ಥೆ ಸಂಕಷ್ಟಕ್ಕೀಡಾಗಿದೆ.
ಕೇಂದ್ರ ಸರ್ಕಾರ ದೇಶದಲ್ಲಿ GSTಯನ್ನ ಜಾರಿಗೆ ತಂದ ನಂತರ ವ್ಯಾಪಾರ ವಹಿವಾಟು ಸಂಪೂಣರ್ವಾಗಿ ಕುಗ್ಗಿ ಹೋಗಿತ್ತು. ಈಗ ಆ ಬಿಸಿ ಕೆಎಸ್'ಆರ್ಟಿಸಿಗೆ ತಟ್ಟಿದೆ. ಗುಜರಿಗೆ ಸೇರಿರುವ 800 ಬಸ್'ಗಳ ಖರೀದಿಗೆ ಗುಜರಿಯವರು ಮುಂದೆ ಬರುತ್ತಿಲ್ಲ. ಗುಜರಿ ವಸ್ತುಗಳ ಖರೀದಿ ಮೇಲೆ ಶೇಕಡ 28ರಷ್ಟು ತೆರಿಗೆ ವಿಧಿಸಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿಯ ಗುಜರಿ ಬಸ್‌ಗಳನ್ನು ಡಿಪೊಗಳಲ್ಲಿ ನಿಲ್ಲಿಸಲಾಗಿದೆ. ಇದರಿಂದಾಗಿ ಬಸ್'ಗಳ ರಿಪೇರಿ ಮಾಡಲು, ಬಸ್'ಗಳ ನಿರ್ವಹಣೆ ಮಾಡಲು ಡಿಪೋಗಳಲ್ಲಿ ಜಾಗ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಗುಜರಿ ವಸ್ತುಗಳು ಡಿಪೋದಲ್ಲಿ ಹೆಚ್ಚಾಗಿರುವುದು ಅಗ್ನಿ ಅವಘಡ ಹೆಚ್ಚಾಗಲು ಕಾರಣವಾಗಿದೆ. ಸದ್ಯಕ್ಕೆ ಅಂದಾಜು 2 ಕೋಟಿ ಬೆಲೆ ಬಾಳುವ ಗುಜರಿ ಬಿದ್ದಿದೆ. ಇದನ್ನ ತ್ವರಿತಗತಿಯಲ್ಲಿ ವಿಲೇವಾರಿ ಮಾಡದೇ ಹೋದರೆ ಅಪಾಯದ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.