GST ಜಾರಿ ಹಿನ್ನೆಲೆ ಬಿಗ್ ಬಜಾರ್'ನಿಂದ ಗ್ರಾಹಕರಿಗೆ ಬಂಪರ್ ಆಫರ್!

Published : Jul 01, 2017, 07:41 AM ISTUpdated : Apr 11, 2018, 01:12 PM IST
GST ಜಾರಿ ಹಿನ್ನೆಲೆ ಬಿಗ್ ಬಜಾರ್'ನಿಂದ ಗ್ರಾಹಕರಿಗೆ ಬಂಪರ್ ಆಫರ್!

ಸಾರಾಂಶ

ಸಾಮಾನ್ಯವಾಗಿ ದೀಪಾವಳಿ, ಯುಗಾದಿ ಸಂದರ್ಭದಲ್ಲಿ ಗ್ರಾಹಕರಿಗೆ ಬಂಫರ್​ ಆಫರ್ ಸಿಗುವುದು ಕಾಮನ್. ಆದರೆ ಜಿ.ಎಸ್.ಟಿಯಿಂದ ಮಿಡನೈಟ್​'ನಲ್ಲೇ ಬಂಪರ್​ ಆಫರ್​ ಸಿಗುವ ಹಾಗಾಗಿದೆ. ದೇಶಾದ್ಯಂತ ಮೂರು ಗಂಟೆಯಲ್ಲಿ ಶೇ.30 ರಷ್ಟು ಆಫರ್​​ರನ್ನ ನೋಡುವ ಮೂಲಕ ಬಿಗ್​ ಬಜಾರ್​ ಜಿಎಸ್​ಟಿಯನ್ನ ಸ್ವಾಗತಿಸಿದೆ.

ಬೆಂಗಳೂರು(ಜೂ.01): ಸಾಮಾನ್ಯವಾಗಿ ದೀಪಾವಳಿ, ಯುಗಾದಿ ಸಂದರ್ಭದಲ್ಲಿ ಗ್ರಾಹಕರಿಗೆ ಬಂಫರ್​ ಆಫರ್ ಸಿಗುವುದು ಕಾಮನ್. ಆದರೆ ಜಿ.ಎಸ್.ಟಿಯಿಂದ ಮಿಡನೈಟ್​'ನಲ್ಲೇ ಬಂಪರ್​ ಆಫರ್​ ಸಿಗುವ ಹಾಗಾಗಿದೆ. ದೇಶಾದ್ಯಂತ ಮೂರು ಗಂಟೆಯಲ್ಲಿ ಶೇ.30 ರಷ್ಟು ಆಫರ್​​ರನ್ನ ನೋಡುವ ಮೂಲಕ ಬಿಗ್​ ಬಜಾರ್​ ಜಿಎಸ್​ಟಿಯನ್ನ ಸ್ವಾಗತಿಸಿದೆ.

ಇಂದಿನಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದ ಬೆನ್ನಲೇ ಬಿಗ್​​ ಬಜಾರ್​ ತನ್ನ ಗ್ರಾಹಕರಿಗೆ ಭಾರಿ ಆಫರ್​ ನೀಡಿತ್ತು. ಪ್ರಧಾನಿ ಮೋದಿ ದೆಹಲಿಯಲ್ಲಿ ಜಿಎಸ್​ಟಿ ಮಂಡನೆ ಮಾಡುತ್ತಿದ್ದಂತೆ, ಇತ್ತ ಬಿಗ್​ಬಜಾರ್​ ಶೇ.30 ರಷ್ಟು ರಿಯಾಯಿತಿ ನೀಡುವುದರ ಮೂಲಕ ಗ್ರಾಹಕರನ್ನು ತನ್ನತ್ತ  ಸೆಳೆಯಿತು. ಮಧ್ಯ ರಾತ್ರಿ 12 ಗಂಟೆಯಿಂದ 3 ಗಂಟೆವೆರೆಗೂ ಇದ್ದ  ಬಿಗ್​ ಬಜಾರ್​ ಆಫರ್​ ಪಡೆಯಲು ಸಾವಿರಾರೂ ಜನರು ಕ್ಯೂ ನಿಂತು ಇದರ ಸದುಪಯೋಗ ಪಡೆದುಕೊಂಡರು.

ಮಲೇಶ್ವರಂನ ಬಿಗ್​ ಬಜಾರ್​ನಲ್ಲಿ ರಾತ್ರಿ ಮೂರು ಗಂಟೆವರೆಗೂ ಗ್ರಾಹಕರು ಶಾಪಿಂಗ್​ ಮಾಡಲು ಮುಗಿಬಿದ್ದಿದ್ರು. ಟಿ.ವಿ., ರೆಫ್ರಿಜರೇಟರ್ ಗಳು ಸೇರಿದಂತೆ ಹಲವಾರು ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಖರೀದಿ ಮಾಡೋ ಮೂಲಕ ಜಿಎಸ್​ಟಿ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಒಂದು ದೇಶ ಒಂದು ತೆರಿಗೆಯನ್ನು  ಜನರು ಸ್ವಾಗತಿಸಿದರು. ಮೊದಲು ಗ್ರಾಹಕರು ನೀಡುತ್ತಿದ್ದ  ವಿವಿಧ ರೀತಿಯ ಟ್ಯಾಕ್ಸ್'​ಗೆ ಬ್ರೇಕ್​ ಬಿದ್ದಿದ್ದು, ಏಕ್​ ರೂಪ  ತೆರಿಗೆಗೆ ಸಾರ್ವಜನಿಕರು ಬೆಂಬಲ ಸೂಚಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ