ನೆರೆ ಪೀಡಿತ ಕೇರಳಕ್ಕೆ ಹೊಸ ತೆರಿಗೆ

By Web DeskFirst Published Sep 29, 2018, 11:15 AM IST
Highlights

ಕೇರಳದಂತಹ ರಾಜ್ಯಗಳಿಗೆ ಸಂಪನ್ಮೂಲ ಹೊಂದಿಸಲು ಅನುಕೂಲವಾಗುವಂತೆ ಕೆಲವೊಂದು ಸರಕು ಮತ್ತು ಸೇವೆಗಳ ಮೇಲೆ ಹೊಸ ತೆರಿಗೆ ವಿಧಿಸುವ ಕುರಿತು ಪರಿಶೀಲಿಸಲು ಏಳು ಸದಸ್ಯರ ಸಚಿವರ ಸಮಿತಿಯೊಂದನ್ನು ಜಿಎಸ್‌ಟಿ ಮಂಡಳಿ ಶುಕ್ರವಾರ ರಚನೆ ಮಾಡಿದೆ.
 

ನವದೆಹಲಿ: ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಭಾರಿ ನಷ್ಟ ಅನುಭವಿಸಿರುವ ಕೇರಳದಂತಹ ರಾಜ್ಯಗಳಿಗೆ ಸಂಪನ್ಮೂಲ ಹೊಂದಿಸಲು ಅನುಕೂಲವಾಗುವಂತೆ ಕೆಲವೊಂದು ಸರಕು ಮತ್ತು ಸೇವೆಗಳ ಮೇಲೆ ಹೊಸ ತೆರಿಗೆ ವಿಧಿಸುವ ಕುರಿತು ಪರಿಶೀಲಿಸಲು ಏಳು
ಸದಸ್ಯರ ಸಚಿವರ ಸಮಿತಿಯೊಂದನ್ನು ಜಿಎಸ್‌ಟಿ ಮಂಡಳಿ ಶುಕ್ರವಾರ ರಚನೆ ಮಾಡಿದೆ.

ಪ್ರವಾಹದಿಂದ ಆಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ತನ್ನ ರಾಜ್ಯದೊಳಗೆ ಸರಕು ಮತ್ತು ಸೇವೆಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಕೇರಳ ಅವಕಾಶ ಕೋರಿದೆ. ಈ ಬಗ್ಗೆ ಪರಿಶೀಲಿಸಲು ಏಳು ಸಚಿವರ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ. 

click me!