ಜಿಎಸ್'ಟಿ : ಜನತೆಗೆ ದೀಪಾವಳಿ ಬಂಪರ್ ಕೊಡುಗೆ ನೀಡಿದ ಕೇಂದ್ರ,ಎಷ್ಟೆಷ್ಟು ಕಡಿಮೆ ಇಲ್ಲಿದೆ ಮಾಹಿತಿ

Published : Oct 06, 2017, 09:53 PM ISTUpdated : Apr 11, 2018, 01:02 PM IST
ಜಿಎಸ್'ಟಿ : ಜನತೆಗೆ ದೀಪಾವಳಿ ಬಂಪರ್ ಕೊಡುಗೆ ನೀಡಿದ ಕೇಂದ್ರ,ಎಷ್ಟೆಷ್ಟು ಕಡಿಮೆ ಇಲ್ಲಿದೆ ಮಾಹಿತಿ

ಸಾರಾಂಶ

ದೇಶದ ಜನತೆಗೆ ಮಹತ್ವದ ದೀಪಾವಳಿ ಕೊಡುಗೆಗಳನ್ನು ಪ್ರಕಟಿಸಿದ್ದು ಒಟ್ಟು 27 ವಸ್ತುಗಳ ತೆರಿಗೆಯನ್ನು ಶೇಕಡವಾರು ಕಡಿಮೆಗೊಳಿಸಿದ್ದಾರೆ.

ದೆಹಲಿಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಜಿಎಸ್'ಟಿ ಕೌನ್ಸಿಲ್ ಸಭೆ ನಡೆಸಿ ದೇಶದ ಜನತೆಗೆ ಮಹತ್ವದ ದೀಪಾವಳಿ ಕೊಡುಗೆಗಳನ್ನು ಪ್ರಕಟಿಸಿದ್ದು ಒಟ್ಟು 27 ವಸ್ತುಗಳ ತೆರಿಗೆಯನ್ನು ಶೇಕಡವಾರು ಕಡಿಮೆಗೊಳಿಸಿದ್ದಾರೆ.

ಪ್ರಕಟಣೆಯ ಪ್ರಮುಖ ಅಂಶಗಳು

  • ಬಟ್ಟೆ - ಶೇಕಡ 12ರಿಂದ ಶೇಕಡ 5ಕ್ಕೆ ಇಳಿಕೆ
  • ಕೃತಕ ಆಭರಣ ಮತ್ತು ಪೇಂಟಿಂಗ್​ ವಸ್ತುಗಳು ಶೇ.5ಕ್ಕೆ ಇಳಿಕೆ
  • ಡೀಸೆಲ್ ಇಂಜಿನ್, ಪಂಪ್'ಗಳ  ಬಿಡಿಭಾಗಗಳು - ಶೇ.28ರಿಂದ ಶೇ.18ಕ್ಕೆ ಇಳಿಕೆ
  • ಬ್ರ್ಯಾಂಡ್'ಯೇತರ ಆಯುರ್ವೇದಿಕ್ ಔಷಧಗಳು ಶೇ.12 ರಿಂದ 5
  • ಕಾಖ್ರಾ ಹಾಗೂ ಪ್ಲ್ಯಾನ್ ಚಪಾತಿ 12 ರಿಂದ 5
  • ಐಸಿಡಿಎಸ್ ಆಹಾರ ಪ್ಯಾಕೇಟ್'ಗಳು18ರಿಂದ 5
  • ಕತ್ತರಿಸಿದ ಒಣಗಿದ ಮಾವಿನ ಹಣ್ಣುಗಳು 12 ರಿಂದ 5
  • ರಬ್ಬರ್ ತ್ಯಾಜ್ಯ 18ರಿಂದ 5
  • ಇ-ತ್ಯಾಜ್ಯ ಶೇ.5
  • ಮಾರ್ಬಲ್ ಹಾಗೂ ಗ್ರಾನೈಟ್'ಗಳನ್ನು ಹೊರತುಪಡಿಸಿದ ಫ್ಲೋರಿಂಗ್ ಕಲ್ಲುಗಳು ಶೇ.28ರಿಂದ 18
  • ವಳಿ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಶೇ 12ರಿಂದ 5ಕ್ಕೆ ಇಳಿಕೆ
  • ಮೊದಲ ರಿಯಾಯಿತಿಯಾಗಿ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಪಾವತಿಸಿದ ತೆರಿಗೆಗಳನ್ನು ಅಕ್ಟೋಬರ್‌ 10 ಮತ್ತು 18ರಂದು ಹಿಂದಿರುಗಿಸುವಿಕೆ
  • 75 ಲಕ್ಷದಿಂದ 1 ಕೋಟಿ ರೂ.ವರೆಗಿನ ವಹಿವಾಟು ನಡೆಸುವ ಉದ್ಯಮಿಗಳಿಗೆ ಪರಿಹಾರ ಯೋಜನೆ ಅನುಸಾರ ಸಂಕೀರ್ಣ ಶಿಷ್ಟಾಚಾರಗಳನ್ನು ಅನುಸರಿಸದೆ, ನೇರವಾಗಿ ಶೇ 1ರಿಂದ 5ರ ವರೆಗೆ ತೆರಿಗೆ ಸಲ್ಲಿಸುವ ಅವಕಾಶ
  • ಯೋಜನೆಯಡಿ ತೆರಿಗೆದಾರರು ಪ್ರತಿ ತಿಂಗಳೂ ರಿಟರ್ನ್ಸ್‌ ಸಲ್ಲಿಸುವ ಬದಲು ಮೂರು ತಿಂಗಳಿಗೆ ಒಂದೇ ಬಾರಿ ಸಂಕ್ಷಿಪ್ತ ರಿಟರ್ನ್ಸ್‌ ಸಲ್ಲಿಸಲು ಅವಕಾಶ .
  • ರಫ್ತುದಾರರಿಗೆ ಸಾಂಕೇತಿಕವಾಗಿ ಶೇ. 0.01ರಷ್ಟು ತೆರಿಗೆ, ರಫ್ತುದಾರರು ಈವರೆಗೆ ಪಾವತಿಸುರಿವ ತೆರಿಗೆ ಚೆಕ್​ ಮೂಲಕ ಅ.10ರೊಳಗೆ  ವಾಪಸ್ 
  • ರಫ್ತುದಾರರಿಗಾಗಿ ಹೊಸ ಯೋಜನೆ ಘೋಷಣೆ
  • ಮುಂದಿನ ಏಪ್ರಿಲ್​ನಿಂದ ಇ-ವ್ಯಾಲೆಟ್​​ವ್ಯವಸ್ಥೆ ಜಾರಿ

ಇದೇ ಸಂದರ್ಭದಲ್ಲಿ ಮಾತನಾಡಿದ ಹಣಕಾಸು ಸಚಿವರು ಎಸಿ ರೆಸ್ಟಾರೆಂಟ್'ಗಳಲ್ಲಿ ಜಿಎಸ್'ಟಿ ತೆರಿಗೆ ಕಡಿಮೆಗೊಳಿಸಲು 10 ದಿನಗಳಲ್ಲಿ ಸಮಿತಿ ರಚಿಸುವುದಾಗಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!