‘ದೇಶಕ್ಕೆ ಮಾರಕವಾಯ್ತು ಮೋದಿ ಸರ್ಕಾರದ ಈ ನಿರ್ಧಾರ’

By Web DeskFirst Published Nov 11, 2018, 8:20 AM IST
Highlights

ದೇಶದ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಈ 2 ನಿರ್ಧಾರ ದೇಶದ ಅಭಿವೃದ್ಧಿ ಮೇಲೆ ಮಾರಕ  ಪರಿಣಾಮವನ್ನು ಉಂಟು ಮಾಡಿದ್ದಾಗಿ ಆರ್ ಬಿ ಐ ಮಾಜಿ ಗವರ್ನರ್ ರಘು ರಾಂ ರಾಜನ್ ಆರೋಪಿಸಿದ್ದಾರೆ. 

ವಾಷಿಂಗ್ಟನ್‌ :  ಕೇಂದ್ರ ಸರ್ಕಾರ ಜಾರಿಗೆ ತಂದ ಅಪನಗದೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನಿರ್ಧಾರಗಳಿಂದಾಗಿ ಕಳೆದ ವರ್ಷ ದೇಶದ ಆರ್ಥಿಕ ಪ್ರಗತಿಗೆ ಅಡ್ಡಿ ಉಂಟಾಯಿತು ಎಂದು ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್‌ ರಘುರಾಂ ರಾಜನ್‌ ವಿಶ್ಲೇಷಿಸಿದ್ದಾರೆ.

2012ರಿಂದ 2016ರವರೆಗೆ ಭಾರತ ಶರವೇಗದ ಪ್ರಗತಿ ಕಾಣುತ್ತಿತ್ತು. ಜತೆಗೆ ವಿಶ್ವದ ಆರ್ಥಿಕತೆ ದಾಪುಗಾಲು ಇಡುತ್ತಿತ್ತು. ಅಂತಹ ಸಂದರ್ಭದಲ್ಲಿ ಕೈಗೊಂಡ ಈ ಎರಡು ನಿರ್ಧಾರಗಳಿಂದಾಗಿ ಭಾರತದ ಪ್ರಗತಿ ಕುಸಿಯಿತು ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅವರು ಭಾಷಣ ಮಾಡಿದರು.

ದೇಶ ಸದ್ಯ ಶೇ.7ರಷ್ಟುಪ್ರಗತಿ ದರ ಹೊಂದಿದೆ. ಆದರೆ ರಾಷ್ಟ್ರದ ಅವಶ್ಯಕತೆಗಳ ಈಡೇರಿಕೆಗೆ ಈ ದರ ಸಾಕಾಗುವುದಿಲ್ಲ. ಜನರು ಉದ್ಯೋಗ ಮಾರುಕಟ್ಟೆಗೆ ಬರುತ್ತಿದ್ದಾರೆ. ಅವರಿಗೆ ಉದ್ಯೋಗ ಕೊಡಬೇಕಿದೆ. ಹೀಗಾಗಿ ನಮಗೆ ಮತ್ತಷ್ಟುಪ್ರಗತಿ ದರ ಬೇಕು. ಇಷ್ಟುದರದಿಂದ ತೃಪ್ತಿ ಪಡಲು ಸಾಧ್ಯವಿಲ್ಲ ಎಂದು ಸಲಹೆ ಮಾಡಿದರು.

click me!