ಗೋ ಹತ್ಯೆ ಬಗ್ಗೆ ದೂರು: ಪಾಕಿಸ್ತಾನ ಪರ ಘೋಷಣೆ ಕೂಗಿ ಮಹಿಳಾ ಟೆಕ್ಕಿ ಮೇಲೆ ಹಲ್ಲೆ

Published : Oct 15, 2017, 08:12 PM ISTUpdated : Apr 11, 2018, 12:57 PM IST
ಗೋ ಹತ್ಯೆ ಬಗ್ಗೆ ದೂರು: ಪಾಕಿಸ್ತಾನ ಪರ ಘೋಷಣೆ ಕೂಗಿ ಮಹಿಳಾ ಟೆಕ್ಕಿ ಮೇಲೆ ಹಲ್ಲೆ

ಸಾರಾಂಶ

. ನಿನ್ನೆ ರಾತ್ರಿ ತಲಘಟ್ಟಪುರ ಬಳಿಯ ಟಿಪ್ಪು ಸರ್ಕಲ್ ಕಸಾಯಿ ಖಾನೆ ಬಳಿ ಘಟನೆ ನಡೆದಿದೆ.

ಬೆಂಗಳೂರು(ಅ.15): ಗೋಹತ್ಯೆ ಬಗ್ಗೆ ದೂರು ನೀಡಿದ್ದಕ್ಕಾಗಿ ಮಹಿಳಾ ಟೆಕ್ಕಿ ಒಬ್ಬರ ಮೇಲೆ 100ಕ್ಕೂ ಹೆಚ್ಚು ಜನರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ.

ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಹಿರಿಯ ಉದ್ಯೋಗಿಯಾಗಿರುವ ನಂದಿನಿ ಹಲ್ಲೆಗೊಳಗಾದ ಮಹಿಳೆ. ನಿನ್ನೆ ರಾತ್ರಿ ತಲಘಟ್ಟಪುರ ಬಳಿಯ ಟಿಪ್ಪು ಸರ್ಕಲ್ ಕಸಾಯಿ ಖಾನೆ ಬಳಿ ಘಟನೆ ನಡೆದಿದೆ. ನಂದಿನಿ ಅವರು ಗೋಹತ್ಯೆ ಬಗ್ಗೆ ದೂರು ನೀಡಿ ಇಬ್ಬರು ಪೇದೆಗಳೊಂದಿಗೆ ಸ್ಥಳಕ್ಕೆ ಹೋಗಿದ್ದರು.

ಈ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ಜನರಿದ್ದ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆ ನಡೆಸುವಾಗ ಪಾಕಿಸ್ತಾನ್ ಪರ ಘೊಷಣೆ ಕೂಗಿದ್ದಾರೆ. ಗುಂಪನ್ನು ನೋಡುತ್ತಲೇ ಸ್ಥಳದಿಂದ ಪೇದೆಗಳು ಕಾಲ್ಕಿತ್ತಿದ್ದಾರೆ. ನಂದಿನಿ ಅವರ ಇನ್ನೋವಾ ಕಾರು ಸಂಪೂರ್ಣ ಜಖಂ ಆಗಿದೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನಕೋತ್ಸವದಲ್ಲಿ ಗಾಯಕ ನವೀನ್ ಸಜ್ಜು ಜೊತೆಗೆ ನಾಚುತ್ತಲೇ ಹೆಜ್ಜೆ ಹಾಕಿದ ಪತ್ನಿ ಉಷಾ, ಡಿಕೆಶಿ ಫುಲ್ ಎಂಜಾಯ್
'ನನಗೆ ಹಣ್ಣುಗಳೆಂದರೆ ಇಷ್ಟ..' ಎಂದಿದ್ದೇ ತಡ; ಬೆಂಗಳೂರಿನ ಪುಟ್ಟ ಮಕ್ಕಳು ಮಾಡುತ್ತಿರುವ ಕೆಲಸಕ್ಕೆ ನೆಟ್ಟಿಗರು ಫಿದಾ!