ನಾನು ಹಿಂದೂ ಸಮುದಾಯದ ಬಹುದೊಡ್ಡ ಅಭಿಮಾನಿ:ಟ್ರಂಪ್

By Web DeskFirst Published Oct 16, 2016, 6:56 AM IST
Highlights

ಅನಿವಾಸಿ ಭಾರತೀಯರು ಹಮ್ಮಿಕೊಂಡಿದ್ದ ರಿಪಬ್ಲಿಕನ್ ಅಭಿಯಾನದಲ್ಲಿ ಮಾತನಾಡಿದ ಅವರು, ನಾನು ಹಿಂದೂ ಅಭಿಮಾನಿಗಳ ಜೊತೆಗೆ ಭಾರತೀಯ ಅಭಿಮಾನಿಯೂ ಹೌದು. ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಶ್ವೇತಭವನದಲ್ಲಿ ಹಿಂದೂ ಸ್ನೇಹಿತರ ಸಂಖ್ಯೆ ಹೆಚ್ಚಾಗಲಿದೆ ಎಂದಿದ್ದಾರೆ.

ಎಡಿಸನ್(ಅ.16): ನಾನು ಹಿಂದೂ ಸಮುದಾಯದ ಬಹುದೊಡ್ಡ ಅಭಿಮಾನಿ. ಉತ್ತಮ ಗುಣಗಳನ್ನು ಹೊಂದಿರುವ ಅವರು ಅದ್ಭುತ ಉದ್ಯಮಿಗಳೂ ಕೂಡ ಹೌದು ಎಂದು ಅಮೆರಿಕಾದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅನಿವಾಸಿ ಭಾರತೀಯರು ಹಮ್ಮಿಕೊಂಡಿದ್ದ ರಿಪಬ್ಲಿಕನ್ ಅಭಿಯಾನದಲ್ಲಿ ಮಾತನಾಡಿದ ಅವರು, ನಾನು ಹಿಂದೂ ಅಭಿಮಾನಿಗಳ ಜೊತೆಗೆ ಭಾರತೀಯ ಅಭಿಮಾನಿಯೂ ಹೌದು. ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಶ್ವೇತಭವನದಲ್ಲಿ ಹಿಂದೂ ಸ್ನೇಹಿತರ ಸಂಖ್ಯೆ ಹೆಚ್ಚಾಗಲಿದೆ ಎಂದಿದ್ದಾರೆ.

ಭಾರತ ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ರಾಷ್ಟ್ರವಾಗಿದೆ. ನಾನು ಅಧಿಕಾರಕ್ಕೆ ಬಂದರೆ ಭಾರತ ಹಾಗೂ ಅಮೆರಿಕ ಜಗತ್ತಿನ ಉತ್ತಮ ಗೆಳೆತನ ಹೊಂದಿರುವ ರಾಷ್ಟ್ರಗಳಾಗಲಿವೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿಯವರನ್ನು ಕೊಂಡಾಡಿರುವ ಟ್ರಂಪ್, ಮೋದಿ ನೇತೃತ್ವದಲ್ಲಿ ಭಾರತ ಯಶಸ್ವಿಯಾಗಿ ಸಾಗುತ್ತಿದೆ. ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿ ಸಾಕಷ್ಟು ಆರ್ಥಿಕ ಹಾಗೂ ಆಡಳಿತಾತ್ಮಕ ಸುಧಾರಣೆಗಳು ಕಂಡುಬಂದಿವೆ. ಮೋದಿಯನ್ನು ಬೇಟಿ ಮಾಡಿ ಮಾತುಕತೆ ನಡೆಸಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

click me!