ದೇಶದ ಪ್ರತಿ ಬಡ ಕುಟುಂಬಕ್ಕೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಉಚಿತ

By Web DeskFirst Published Dec 18, 2018, 10:05 AM IST
Highlights

ಎಲ್ಲಾ ಬಡವರಿಗೂ ಉಚಿತ ಎಲ್‌ಪಿಜಿ ಸಂಪರ್ಕ ವಿಸ್ತರಣೆ

ನವದೆಹಲಿ[ಡಿ.18]: ಉಜ್ವಲ ಯೋಜನೆ ಮೂಲಕ ಉಚಿತವಾಗಿ ವಿತರಿಸುವ ಎಲ್‌ಪಿಜಿ ಸಂಪರ್ಕವನ್ನು ದೇಶಾದ್ಯಂತ ಎಲ್ಲಾ ಬಡವರಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸೋಮವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

2016ರಲ್ಲಿ ಈ ಯೋಜನೆ ಆರಂಭಿಸಿದಾಗ ಬಡತನ ರೇಖೆಗಿಂತ ಕೆಳಗಿರುವ ಮಹಿಳಾ ಸದಸ್ಯರಿರುವ ಮನೆಗಳಿಗೆ ಮಾತ್ರ ಉಚಿತ ಎಲ್‌ಪಿಜಿ ಸಂಪರ್ಕ ನೀಡಲಾಗುತ್ತಿತ್ತು. ಇದೀಗ ಯೋಜನೆಯನ್ನು ಎಲ್ಲಾ ಬಡವರಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಹಾಲಿ ಎಲ್‌ಪಿಜಿ ಸಂಪರ್ಕ ಹೊಂದಿರದ ಮತ್ತು ಹಾಲಿ ಜಾರಿಯಲ್ಲಿರುವ ಯೋಜನೆಯಿಂದ ಲಾಭ ಪಡೆದುಕೊಂಡಿದವರಿಗೆ ಹೊಸ ಯೋಜನೆ ಲಭ್ಯವಾಗಲಿದೆ. ಈ ಯೋಜನೆಯಡಿ ಸಂಪರ್ಕ ಉಚಿತವಾಗಿರಲಿದೆ.

ಸ್ವೌವ್‌ ಗ್ರಾಹಕರೇ ಖರೀದಿಸಬೇಕು. ಆದರೆ ಈ ಹೊರೆಯನ್ನು ಕಡಿಮೆ ಮಾಡಲು ಸ್ಟೌವ್‌ನ ಬೆಲೆ ಮತ್ತು ಮೊದಲ ಮೊದಲ ಗ್ಯಾಸ್‌ಗೆ ಆಗುವ ವೆಚ್ಚವನ್ನು ಮಾಸಿಕ ಹಂತಹಂತವಾಗಿ ಪಾವತಿ ಮಾಡುವ ಅವಕಾಶ ಇರುತ್ತದೆ.

click me!