ನೋಟ್‌ ಬ್ಯಾನ್ ಬಳಿಕ ಆರ್ಥಿಕ ಪ್ರಗತಿ ಕುಂಠಿತ!: ರಾಜನ್

By Web DeskFirst Published Dec 18, 2018, 9:35 AM IST
Highlights

ವಿಶ್ವವೇ ಮುಂದೆ ಸಾಗುವಾಗ ನಾವು ಹಿಂದೆ ಉಳಿದೆವು| ವಿವಿಧ ವರದಿಗಳು ಕೂಡ ಇದನ್ನೇ ಹೇಳಿವೆ

ನವದೆಹಲಿ[ಡಿ.18]: ಇಡೀ ವಿಶ್ವವೇ ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಹೊಂದುತ್ತಿರುವಾಗ ಕೇಂದ್ರ ಸರ್ಕಾರ ಜಾರಿಗೆ ತಂದ ಅಪನಗದೀಕರಣದಿಂದಾಗಿ ಭಾರತದ ಆರ್ಥಿಕ ಬೆಳವಣಿಗೆ ದರ ಕುಂಠಿತವಾಯಿತು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಮಾಜಿ ಗವರ್ನರ್‌ ರಘುರಾಂ ರಾಜನ್‌ ಪುನರುಚ್ಚರಿಸಿದ್ದಾರೆ.

2017ರಲ್ಲಿ ವಿಶ್ವ ಶರವೇಗದ ಪ್ರಗತಿ ಹೊಂದುತ್ತಿತ್ತು. ಆ ಸಂದರ್ಭದಲ್ಲಿ ಅಪನಗದೀಕರಣದಿಂದಾಗಿ ಭಾರತದ ಬೆಳವಣಿಗೆ ದರ ಮಂದವಾಯಿತು ಎಂಬುದು ನನ್ನ ಒಟ್ಟಾರೆ ಅಭಿಪ್ರಾಯ. ವಿವಿಧ ವರದಿಗಳು ಕೂಡ ಇದನ್ನೇ ದೃಢೀಕರಿಸಿವೆ. ಅಪನಗದೀಕರಣ ಮಾತ್ರವೇ ಅಲ್ಲದೆ ಜಿಎಸ್‌ಟಿ ಕೂಡ ಪ್ರಗತಿ ಕುಂಠಿತಗೊಳ್ಳುವುದಕ್ಕೆ ಕೊಡುಗೆ ನೀಡಿತು ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆದರೆ ನನ್ನನ್ನು ಜಿಎಸ್‌ಟಿ ವಿರೋಧಿ ಎನ್ನುವ ಮೊದಲೇ ಒಂದು ಹೇಳಿಬಿಡುತ್ತೇನೆ. ಜಿಎಸ್‌ಟಿ ಎಂಬುದು ದೀರ್ಘಾವಧಿಯಲ್ಲಿ ಉತ್ತಮ ಆಲೋಚನೆ. ಅಲ್ಪಾವಧಿಯಲ್ಲಿ ಅದರಿಂದ ಅಡ್ಡ ಪರಿಣಾಮಗಳು ಇವೆ ಎಂದು ಹೇಳಿದ್ದಾರೆ.

ನೋಟು ಬಂದಿ ನಿರ್ಧಾರ ಕುರಿತು ಕೇಂದ್ರ ಸರ್ಕಾರ ತಮ್ಮನ್ನು ಸಂಪರ್ಕಿಸಿತ್ತೇ ಎಂಬ ಪ್ರಶ್ನೆಗೆ, ಕಪ್ಪು ಹಣಕ್ಕೆ ಕಡಿವಾಣ ಹಾಕಲು ವ್ಯವಸ್ಥೆಯಿಂದ ದುಬಾರಿ ಮೌಲ್ಯದ ನೋಟುಗಳನ್ನು ರದ್ದುಗೊಳಿಸುವ ಕುರಿತು ನನ್ನ ಅಭಿಪ್ರಾಯವನ್ನು ಕೇಳಿದ್ದರು. ಆದರೆ ಅದು ಕೆಟ್ಟಆಲೋಚನೆ ಎಂದಿದ್ದೆ ಎಂದು ತಿಳಿಸಿದ್ದಾರೆ.

click me!